ADVERTISEMENT

ಫ್ರೀಡಂ ಶೇಂಗಾ ಎಣ್ಣೆಯ 5 ಲೀಟರ್‌ ಜಾರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 14:14 IST
Last Updated 20 ಏಪ್ರಿಲ್ 2022, 14:14 IST

ಬೆಂಗಳೂರು: ಜೆಮಿನಿ ಎಡಿಬಿಲ್ಸ್‌ ಆ್ಯಂಡ್‌ ಫ್ಯಾಟ್ಸ್‌ ಇಂಡಿಯಾ ಲಿಮಿಟೆಡ್‌, ಫ್ರೀಡಂ ಶೇಂಗಾ ಎಣ್ಣೆಯ ಹೊಸ 5 ಲೀಟರ್‌ ಜಾರ್‌ ಬಿಡುಗಡೆ ಮಾಡಿದೆ. 'ಫ್ರೀಡಂನ ಆರೋಗ್ಯಕರ ಅಡುಗೆ ಎಣ್ಣೆಯ ಶ್ರೇಣಿಗೆ ಇದು ಹೊಸ ಸೇರ್ಪಡೆ’ ಎಂದು ಫ್ರೀಡಂ ಹೆಲ್ದಿ ಕುಕಿಂಗ್ ಆಯಿಲ್ಸ್‌ನ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಪಿ. ಚಂದ್ರಶೇಖರ ರೆಡ್ಡಿ ಹೇಳಿದ್ದಾರೆ.

‘ವಿಶಿಷ್ಟ ಸ್ವಾದ ಮತ್ತು ಪರಿಮಳದಿಂದಾಗಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಉಪ್ಪಿನಕಾಯಿ ತಯಾರಿಕೆಗೆ ಶೇಂಗಾ ಎಣ್ಣೆ ಬಳಸಲಾಗುತ್ತಿದೆ. ಉಪ್ಪಿನ ಕಾಯಿಯ ಸೀಸನ್‌ನಲ್ಲಿ ಶೇಂಗಾ ಎಣ್ಣೆ ಬೇಡಿಕೆಯು ನಾಲ್ಕು ಪಟ್ಟು ಹೆಚ್ಚಾಗುವುದನ್ನು ಗಮನಿಸಿದ್ದೇವೆ. ಹೀಗಾಗಿ ಈಗ 5 ಲೀಟರ್‌ನ ಜಾರ್‌ ಬಿಡುಗಡೆ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT