ADVERTISEMENT

ನೆಸ್ಲೆ ಉತ್ಪನ್ನದ ಮಾದರಿ ಸಂಗ್ರಹ ಆರಂಭ: ಕಮಲಾ ವರ್ಧನ ರಾವ್‌

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:38 IST
Last Updated 25 ಏಪ್ರಿಲ್ 2024, 15:38 IST
.....
.....   

ನವದೆಹಲಿ: ‘ದೇಶದ ವಿವಿಧೆಡೆ ನೆಸ್ಲೆ ಇಂಡಿಯಾ ಕಂಪನಿಯ ಶಿಶು ಆಹಾರವಾದ ‘ಸೆರೆಲಾಕ್‌’ನ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಸಿಇಒ ಜಿ. ಕಮಲಾ ವರ್ಧನ ರಾವ್‌ ತಿಳಿಸಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘವು ಆಹಾರದ ಸಾರವರ್ಧನೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇನ್ನು 15ರಿಂದ 20 ದಿನದೊಳಗೆ ಮಾದರಿ ಸಂಗ್ರಹಿಸುವ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ’ ಎಂದರು.

‘ಮನುಷ್ಯನ ಆರೋಗ್ಯ ವೃದ್ಧಿಗೆ ಅಕ್ಕಿ ಹೊರತಾಗಿ ಸಿರಿಧಾನ್ಯಗಳು ಹಾಗೂ ಇತರೆ ಆಹಾರ ಪದಾರ್ಥಗಳು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಎಫ್‌ಎಂಸಿಜಿ ಕಂಪನಿಗಳು ಸಿರಿಧಾನ್ಯ ಪದಾರ್ಥಗಳನ್ನು ಪರಿಚಯಿಸಿವೆ’ ಎಂದರು. 

ADVERTISEMENT

ನೆಸ್ಲೆ ಕಂಪನಿಯು ಭಾರತದಲ್ಲಿ ಮಾರಾಟ ಮಾಡುವ ಶಿಶು ಆಹಾರದ ಉತ್ಪನ್ನಗಳಲ್ಲಿ ಹೆಚ್ಚುವರಿ ಸಕ್ಕರೆಯನ್ನು ಬೆರೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರವು ತನಿಖೆ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.