ADVERTISEMENT

ORS ಹೆಸರಿನ ಪೇಯಗಳನ್ನು ಹಿಂಪಡೆಯಲು ಆಹಾರ ಗುಣಮಟ್ಟ ಪ್ರಾಧಿಕಾರ ರಾಜ್ಯಗಳಿಗೆ ಸೂಚನೆ

ಪಿಟಿಐ
Published 22 ನವೆಂಬರ್ 2025, 11:40 IST
Last Updated 22 ನವೆಂಬರ್ 2025, 11:40 IST
<div class="paragraphs"><p> ಒಆರ್‌ಎಸ್‌ ಪೊಟ್ಟಣಗಳು&nbsp;</p></div>

ಒಆರ್‌ಎಸ್‌ ಪೊಟ್ಟಣಗಳು 

   

ನವದೆಹಲಿ: ಒಆರ್‌ಎಸ್‌ ಹೆಸರಿನಲ್ಲಿ ರಿಟೇಲ್‌ ಮಾರುಕಟ್ಟೆಗಳಲ್ಲಿ ಮಾರಾಟ ಆಗುತ್ತಿರುವ ಹಣ್ಣಿನ ಪೇಯಗಳನ್ನು, ಕುಡಿಯಲು ಸಿದ್ಧವಾಗಿರುವ ಪೇಯಗಳನ್ನು ಹಾಗೂ ಎಲೆಕ್ಟ್ರೊಲೈಟ್‌ ಪೇಯಗಳನ್ನು ಹಿಂಪಡೆಯಬೇಕು ಎಂದು ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ರಾಜ್ಯಗಳಿಗೆ ಸೂಚನೆ ನೀಡಿದೆ ಎಂದು ಮೂಲಗಳು ಹೇಳಿವೆ.

ಆಹಾರ ಉದ್ಯಮದಲ್ಲಿ ತೊಡಗಿರುವವರು ತಮ್ಮ ಉತ್ಪನ್ನಗಳ ಮೇಲೆ ‘ಒಆರ್‌ಎಸ್‌’ ಎಂದು ನಮೂದಿಸುವುದನ್ನು ನಿಲ್ಲಿಸಬೇಕು ಎಂದು ಎಫ್‌ಎಸ್‌ಎಸ್‌ಎಐ ಈ ಹಿಂದೆ ಸೂಚನೆ ನೀಡಿತ್ತು. ಈ ರೀತಿ ನಮೂದಿಸುವುದು ಗ್ರಾಹಕರನ್ನು ತಪ್ಪುದಾರಿಗೆ ಎಳೆಯುತ್ತದೆ ಎಂದು ಹೇಳಿತ್ತು.

ADVERTISEMENT

ರಾಜ್ಯಗಳ ಆಹಾರ ಆಯುಕ್ತರಿಗೆ ನವೆಂಬರ್‌ 19ರಂದು ಪತ್ರವೊಂದನ್ನು ಬರೆದಿರುವ ಎಫ್‌ಎಸ್‌ಎಸ್‌ಎಐ, ಗ್ರಾಹಕರನ್ನು ತಪ್ಪುದಾರಿಗೆ ಎಳೆಯುವಂತೆ ಇರುವ ಹಣ್ಣಿನ ಪಾನೀಯಗಳು, ಕುಡಿಯಲು ಸಿದ್ಧವಾಗಿರುವ ಪೇಯಗಳು ಹಾಗೂ ಎಲೆಕ್ಟ್ರೋಲೈಟ್‌ ಪೇಯಗಳು ಒಆರ್‌ಎಸ್‌ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದ್ದರೆ, ಅವುಗಳನ್ನು ರಿಟೇಲ್‌ ಮಾರುಕಟ್ಟೆಯಿಂದ ಹಿಂಪಡೆಯಬೇಕು ಎಂದು ಹೇಳಿದೆ.

ತಾನು ಅಕ್ಟೋಬರ್‌ನಲ್ಲಿ ಹೊರಡಿಸಿರುವ ಆದೇಶವೊಂದನ್ನು ಉಲ್ಲಂಘಿಸುವ ಬಗೆಯಲ್ಲಿ ಈ ಉತ್ಪನ್ನಗಳು ಈಗಲೂ ಮಾರುಕಟ್ಟೆಯಲ್ಲಿ ಸಿಗುತ್ತಿವೆ ಎಂದು ಎಫ್‌ಎಸ್‌ಎಸ್‌ಎಐ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.