ನವದೆಹಲಿ: ಅಮೆರಿಕವು ಔಷಧಗಳ ಆಮದಿಗೆ ವಿಧಿಸಿರುವ ಶೇ 100ರಷ್ಟು ಸುಂಕ ಹೇರಿಕೆಯು ದೇಶದ ಜೆನರಿಕ್ ಔಷಧಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಔಷಧ ಒಕ್ಕೂಟ (ಐಪಿಎ) ತಿಳಿಸಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಹಕ್ಕುಸ್ವಾಮ್ಯ ಪಡೆದಿರುವ ಅಥವಾ ಬ್ರ್ಯಾಂಡೆಡ್ ಔಷಧಗಳ ಮೇಲೆ ಮಾತ್ರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಶೇ 100ರಷ್ಟು ಸುಂಕ ವಿಧಿಸಿದ್ದಾರೆ. ಆದರೆ, ಈ ಸುಂಕವು ಜೆನರಿಕ್ ಔಷಧಗಳಿಗೆ ಅನ್ವಯ ಆಗುವುದಿಲ್ಲ ಎಂದು ಐಪಿಎ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಜೈನ್ ಹೇಳಿದ್ದಾರೆ.
ಭಾರತೀಯ ಔಷಧ ಒಕ್ಕೂಟವು, ಡಾ. ರೆಡ್ಡಿ, ಸನ್ ಫಾರ್ಮಾ, ಲುಪಿನ್, ಜೈಡಸ್ ಲೈಫ್‌ಸೈನ್ಸಸ್ ಸೇರಿದಂತೆ ದೇಶದ ಪ್ರಮುಖ 23 ಔಷಧ ಕಂಪನಿಗಳನ್ನು ಪ್ರತಿನಿಧಿಸುತ್ತದೆ.
ಐಪಿಎ ಸದಸ್ಯರು ದೇಶದ ಔಷಧ ರಫ್ತಿನ ಪೈಕಿ ಶೇ 80ಕ್ಕೂ ಹೆಚ್ಚು ಔಷಧಗಳನ್ನು ರಫ್ತು ಮಾಡುತ್ತಾರೆ. ದೇಶೀಯ ಮಾರುಕಟ್ಟೆಯಲ್ಲಿ ಈ ಔಷಧಗಳ ಪಾಲು ಶೇ 64ರಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.