ADVERTISEMENT

ಆರ್ಥಿಕ ಸಂಕಷ್ಟ: ‘ಗೋ ಫಸ್ಟ್‌’ಗೆ ₹450 ಕೋಟಿ ಮಧ್ಯಂತರ ನೆರವು?

ರಾಯಿಟರ್ಸ್‌
Published 26 ಜೂನ್ 2023, 14:08 IST
Last Updated 26 ಜೂನ್ 2023, 14:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಆರ್ಥಿಕವಾಗಿ ನಷ್ಟದಲ್ಲಿ ಇರುವ ‘ಗೋ ಫಸ್ಟ್‌’ ವಿಮಾನಯಾನ ಕಂಪನಿಯ ಕಾರ್ಯಾಚರಣೆ ಪುನರಾರಂಭಿಸಲು ಅನುಕೂಲ ಆಗುವಂತೆ ₹450 ಕೋಟಿ ಮಧ್ಯಂತರ ನೆರವು ನೀಡಲು ಬ್ಯಾಂಕ್‌ಗಳು ಒಪ್ಪಿಗೆ ನೀಡಿವೆ ಎಂದು ಬ್ಯಾಂಕಿಂಗ್ ಮೂಲಗಳು ಹೇಳಿವೆ.

ಈ ಮಧ್ಯಂತರ ನೆರವಿನ ಮೊತ್ತವು ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದ ವೆಚ್ಚದ ಭಾಗವಾಗಿದೆ. ಇತರೆ ಬಾಕಿಗಳಿಗೆ ನೀಡುವಷ್ಟೇ ಆದ್ಯತೆಯನ್ನು ಈ ಮೊತ್ತಕ್ಕೂ ನೀಡಬೇಕು ಎಂದು ಬ್ಯಾಂಕ್‌ನ ಒಂದು ಮೂಲವು ತಿಳಿಸಿದೆ.

ಕಂಪನಿಯಲ್ಲಿ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡುವ ಆಲೋಚನೆ ಇಲ್ಲ ಎನ್ನುವ ಸೂಚನೆಯನ್ನು ಪ್ರವರ್ತಕರು ನೀಡಿರುವುದಾಗಿ ಹೇಳಿವೆ.

ADVERTISEMENT

ಕಂಪನಿಗೆ ಸಾಲ ನೀಡಿರುವುದರಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾ, ಐಡಿಬಿಐ ಬ್ಯಾಂಕ್‌ ಮತ್ತು ಡಾಯಿಷ್ ಬ್ಯಾಂಕ್‌ ಪ್ರಮುಖವಾಗಿವೆ. ಬ್ಯಾಂಕ್‌ಗಳಿಗೆ ಕಂಪನಿಯು ₹6,521 ಕೋಟಿ ಬಾಕಿ ಉಳಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.