ADVERTISEMENT

ಗೋಐಬಿಬೊ ಜತೆ ಫೋನ್‌ಪೇ ಒಪ್ಪಂದ

ಹೋಟೆಲ್‌ ಕೋಣೆ ಮುಂಗಡ ಕಾದಿರಿಸುವಿಕೆ ಸುಲಭ

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 17:56 IST
Last Updated 22 ಜೂನ್ 2018, 17:56 IST

ಬೆಂಗಳೂರು: ಆನ್‌ಲೈನ್‌ ಪ್ರವಾಸಿ ಸಂಸ್ಥೆ ಗೋಐಬಿಬೊ, ಡಿಜಿಟಲ್‌ ಪಾವತಿ ಸ್ಟಾರ್ಟ್‌ಅಪ್‌ ಫೋನ್‌ಪೇ ಜತೆ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಫಲವಾಗಿ ಮೊಬೈಲ್‌ ವಾಲೆಟ್‌ ಫೋನ್‌ಪೇದ 10 ಕೋಟಿ ಗ್ರಾಹಕರಿಗೆ ಹೋಟೆಲ್‌ ಕೋಣೆ ಮುಂಗಡ ಕಾದಿರಿಸಲು ಮತ್ತು ಹಣ ಪಾವತಿಸುವುದು ಹೆಚ್ಚು ಸುಲಭವಾಗಿರಲಿದೆ. ‘ಫೋನ್‌ಪೇ ಮೊಬೈಲ್‌ ಆ್ಯಪ್‌ನಲ್ಲಿನ ಹೋಟೆಲ್ಸ್‌ (ಮೈಕ್ರೊಆ್ಯಪ್‌) ವಿಭಾಗದಲ್ಲಿ ಗೋಐಬಿಬೊ ಕಿರು ತಂತ್ರಾಂಶವು ಲಭ್ಯ ಇರಲಿದೆ. ಫೋನ್‌ಪೇ ಬಳಕೆದಾರರು ಗೋಐಬಿಬೊದ ಪ್ರೋತ್ಸಾಹ ರೂಪದಲ್ಲಿ ಇರುವ ಗೋಕ್ಯಾಷ್‌ ಕರೆನ್ಸಿ ಬಳಸಿ ದೇಶಿ ಮತ್ತು ವಿದೇಶಗಳಲ್ಲಿನ ಹೋಟೆಲ್‌ಗಳಲ್ಲಿ ಕೋಣೆ ಕಾಯ್ದಿರಿಸಬಹುದು’ ಎಂದು ಫೋನ್‌ಪೇ ಸಿಟಿಒ ರಾಹುಲ್‌ ಚಾರಿ ಹೇಳಿದ್ದಾರೆ.

‘50 ಸಾವಿರಕ್ಕೂ ಹೆಚ್ಚು ಹೋಟೆಲ್, ಹೋಮ್‌ಸ್ಟೇ, ಗೋಇಬಿಬೊ ಪ್ರಮಾಣಪತ್ರ ನೀಡಿದ ಗೋಸ್ಟೇಜ್‌ ಮತ್ತು ವಿದೇಶದಲ್ಲಿನ 5 ಲಕ್ಷ ಹೋಟೆಲ್‌ಗಳನ್ನು ಆಯ್ಕೆ ಮಾಡಿ ಕೊಳ್ಳುವುದು ಸುಲಭವಾಗಲಿದೆ’ ಎಂದು ಗೋಐಬಿಬೊ ಸಿಒಒ ಸಂಜಯ್‌ ಭಾಸಿನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.