ADVERTISEMENT

ಚಿನ್ನದ ದರ ₹ 877 ಏರಿಕೆ

ಪಿಟಿಐ
Published 4 ಜನವರಿ 2021, 14:56 IST
Last Updated 4 ಜನವರಿ 2021, 14:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನ, ಬೆಳ್ಳಿ ದರ ಏರಿಕೆ ಆಗಿದೆ. 10 ಗ್ರಾಂ ಚಿನ್ನದ ದರ ₹ 877ರಷ್ಟು ಏರಿಕೆ ಕಂಡು ₹ 50,619ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿ.ಗೆ ₹ 2,012ರಷ್ಟು ಹೆಚ್ಚಾಗಿ ₹ 69,454ಕ್ಕೆ ತಲುಪಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ ದರ ಏರಿಕೆಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿಯೂ ದರದಲ್ಲಿ ಏರಿಕೆ ಕಂಡುಬಂದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಹೇಳಿದೆ.

ಡಾಲರ್‌ ಮೌಲ್ಯ ಇಳಿಕೆ ಕಂಡಿರುವುದರಿಂದ ಚಿನ್ನದ ದರ ಹೆಚ್ಚಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕ ತಪನ್‌ ಪಟೇಲ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.