ADVERTISEMENT

ಚಿನ್ನದ ಆಮದು: 2020–21ರಲ್ಲಿ ಶೇ 22.58ರಷ್ಟು ಹೆಚ್ಚಳ

ಪಿಟಿಐ
Published 18 ಏಪ್ರಿಲ್ 2021, 13:48 IST
Last Updated 18 ಏಪ್ರಿಲ್ 2021, 13:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2019–20ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020–21ರಲ್ಲಿ ಚಿನ್ನದ ಆಮದು ಶೇಕಡ 22.58ರಷ್ಟು ಏರಿಕೆ ಆಗಿದೆ. ಮೌಲ್ಯದ ಲೆಕ್ಕದಲ್ಲಿ ₹ 2 ಲಕ್ಷ ಕೋಟಿಯಿಂದ ₹ 2.54 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಆದರೆ, ಬೆಳ್ಳಿ ಆಮದು ಶೇ 71ರಷ್ಟು ಕುಸಿತ ಕಂಡಿದ್ದು, ಮೌಲ್ಯದ ಲೆಕ್ಕದಲ್ಲಿ ₹ 5,853 ಕೋಟಿಗಳಷ್ಟಾಗಿದೆ.

ಚಿನ್ನದ ಆಮದು ಏರಿಕೆಯ ಹೊರತಾಗಿಯೂ ದೇಶದ ವ್ಯಾಪಾರ ಕೊರತೆ ಅಂತರವು ₹ 11.91 ಲಕ್ಷ ಕೋಟಿಗಳಿಂದ ₹ 7.29 ಲಕ್ಷ ಕೋಟಿಗಳಿಗೆ ಇಳಿಕೆ ಆಗಿದೆ.

ADVERTISEMENT

ದೇಶಿ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಚಿನ್ನದ ಆಮದು ಪ್ರಮಾಣದಲ್ಲಿ ಏರಿಕೆ ಆಗಿದೆ. ಮುಂಬರುವ ಅಕ್ಷಯ ತೃತೀಯ ಮತ್ತು ಮದುವೆ ಸಮಾರಂಭಗಳ ಸಂದರ್ಭದಲ್ಲಿ ಚಿನ್ನದ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಮಂಡಳಿಯ (ಜಿಜೆಇಪಿಸಿ) ಅಧ್ಯಕ್ಷ ಕೋಲಿನ್‌ ಶಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.