ADVERTISEMENT

ದೆಹಲಿಯಲ್ಲಿ ಚಿನ್ನದ ದರ ₹ 766 ಇಳಿಕೆ

ಪಿಟಿಐ
Published 9 ಜನವರಿ 2020, 15:07 IST
Last Updated 9 ಜನವರಿ 2020, 15:07 IST
ಚಿನ್ನ
ಚಿನ್ನ   

ನವದೆಹಲಿ: ಚಿನಿವಾರಪೇಟೆಯಲ್ಲಿ ಚಿನ್ನದ ಧಾರಣೆ ಗುರುವಾರ 10 ಗ್ರಾಂಗೆ ₹ 766ರಂತೆ ಇಳಿಕೆ ಕಂಡು ₹ 40,634ರಲ್ಲಿ ಮಾರಾಟವಾಯಿತು.

ಬೆಳ್ಳಿ ಬೆಲೆಯೂ ಕೆ.ಜಿಗೆ ₹ 1,148ರಂತೆ ಇಳಿಕೆಯಾಗಿ ₹ 47,932ರಂತೆ ಮಾರಾಟವಾಯಿತು.

ರೂಪಾಯಿ ಮೌಲ್ಯ ವೃದ್ಧಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ. ಇದು ದೇಶಿ ಮಾರುಕಟ್ಟೆಯಲ್ಲಿಯೂ ಪ್ರತಿಫಲಿಸಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟಿಸ್‌ ತಿಳಿಸಿದೆ.

ADVERTISEMENT

ಅಮೆರಿಕ–ಇರಾನ್‌ ಸೇನಾ ಸಂಘರ್ಷದ ತೀವ್ರತೆ ಕಡಿಮೆ ಆಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.