ಸಾಂದರ್ಭಿಕ ಚಿತ್ರ
ಬೆಂಗಳೂರು: ಡೊನಾಲ್ಡ್ ಟ್ರಂಪ್ ಅವರ ಪ್ರತಿ ಸುಂಕ ಹಾವಳಿ ಹಾಗೂ ಭಾರತದ ಷೇರು ಮಾರುಕಟ್ಟೆ ಕುಸಿತದ ನಡುವೆ ಚಿನ್ನದ ದರ ಮತ್ತೆ ಇಂದು ಇಳಿಕೆ ಕಂಡಿದೆ. ಆದರೆ ಬೆಳ್ಳಿಯ ದರ ಸ್ಥಿರವಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಶುದ್ಧ ಚಿನ್ನದ ಬೆಲೆ (24 ಕ್ಯಾರಟ್) ಇಂದು ₹89,730 ಇದೆ. ನಿನ್ನೆ ₹90,380 ಇತ್ತು. ₹650 ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ (22 ಕ್ಯಾರಟ್) ಇಂದು ₹82,250 ಇದೆ. ನಿನ್ನೆ ₹82,850 ಇತ್ತು. 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ₹600 ಇಳಿಕೆಯಾಗಿರುವುದು ಚಿನ್ನ ಪ್ರಿಯರಿಗೆ ಹರ್ಷ ತರಿಸಿದೆ.
ಬೆಂಗಳೂರಿನಲ್ಲಿ ಒಂದು ಕೆ.ಜಿ ಬೆಳ್ಳಿಯ ಬೆಲೆ ₹94,000 ಇದೆ. ನಿನ್ನೆಯೂ ಅಷ್ಟೇ ಇತ್ತು. ದರ ಬದಲಾವಣೆ ಆಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.