ADVERTISEMENT

ಚಿನ್ನದ ದರ ₹ 460ರಷ್ಟು ಇಳಿಕೆ

ಪಿಟಿಐ
Published 14 ಡಿಸೆಂಬರ್ 2020, 15:46 IST
Last Updated 14 ಡಿಸೆಂಬರ್ 2020, 15:46 IST

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನ, ಬೆಳ್ಳಿ ದರ ಇಳಿಕೆ ಆಗಿದೆ. 10 ಗ್ರಾಂ ಚಿನ್ನದ ದರ ₹ 460ರಷ್ಟು ಇಳಿಕೆಯಾಗಿ ₹ 48,371ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿ.ಗೆ ₹ 629ರಷ್ಟು ಇಳಿಕೆಯಾಗಿ ₹ 62,469ರಲ್ಲಿ ಮಾರಾಟವಾಗಿದೆ.

ಕೋವಿಡ್‌–19ಕ್ಕೆ ಲಸಿಕೆ ಲಭ್ಯವಾಗುತ್ತಿರುವುದರಿಂದಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಮಾರಾಟದ ಒತ್ತಡಕ್ಕೆ ಒಳಗಾಗಿ ಬೆಲೆ ಇಳಿಕೆ ಆಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್ ಪಟೇಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT