ADVERTISEMENT

ಆರ್‌ಬಿಐನ ಡೆಪ್ಯುಟಿ ಗವರ್ನರ್‌ ಆಗಿ ಟಿ.ರಬಿ ಶಂಕರ್‌ ನೇಮಕ

ಪಿಟಿಐ
Published 2 ಮೇ 2021, 8:53 IST
Last Updated 2 ಮೇ 2021, 8:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಆರ್‌ಬಿಐನ ನಾಲ್ಕನೇ ಡೆಪ್ಯುಟಿ ಗವರ್ನರ್‌ ಆಗಿಟಿ.ರಬಿ ಶಂಕರ್‌ ಅವರನ್ನು ನೇಮಕ ಮಾಡಲಾಗಿದೆ.

ಬಿಪಿ ಕನೂಂಗೊ ಅವರು ಏಪ್ರಿಲ್‌ 2 ರಂದು ನಿವೃತ್ತಿಯಾದರು. ತೆರವಾಗಿರುವ ಸ್ಥಾನಕ್ಕೆ ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕ ಟಿ.ರಬಿ ಶಂಕರ್‌ ಅವರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

ರಬಿ ಶಂಕರ್‌ ಅವರು ಫಿನ್‌ಟೆಕ್‌, ಮಾಹಿತಿ ತಂತ್ರಜ್ಞಾನ, ಪಾವತಿ ವ್ಯವಸ್ಥೆಯ ನೇತೃತ್ವವನ್ನು ವಹಿಸಿಕೊಳ್ಳುವ ಸಾಧ್ಯತೆಗಳಿವೆ.

ADVERTISEMENT

1990ರ ಸೆಪ್ಟೆಂಬರ್‌ನಲ್ಲಿ ರಬಿ ಶಂಕರ್‌ ಅವರು ಸಂಶೋಧನಾ ಅಧಿಕಾರಿಯಾಗಿ ಆರ್‌ಬಿಐಗೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.