ADVERTISEMENT

ಗ್ರಾಹಕ ಸೇವೆ: ಜೊಮ್ಯಾಟೊ, ಸ್ವಿಗ್ಗಿಗೆ ಕೇಂದ್ರ ಸೂಚನೆ

ಪಿಟಿಐ
Published 13 ಜೂನ್ 2022, 16:29 IST
Last Updated 13 ಜೂನ್ 2022, 16:29 IST

ನವದೆಹಲಿ (ಪಿಟಿಐ): ಗ್ರಾಹಕರಿಂದ ಬರುವ ದೂರುಗಳನ್ನು ಇತ್ಯರ್ಥಪಡಿಸುವ ವ್ಯವಸ್ಥೆಯನ್ನು ಹೇಗೆ ಉತ್ತಮಪಡಿಸಲಾಗುವುದು ಎಂಬ ಬಗ್ಗೆ 15 ದಿನಗಳಲ್ಲಿ ಪ್ರಸ್ತಾವ ಸಲ್ಲಿಸುವಂತೆ ಆಹಾರ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುವ ಸ್ವಿಗ್ಗಿ, ಜೊಮ್ಯಾಟೊದಂತಹ ಕಂಪನಿಗಳಿಗೆ ಕೇಂದ್ರ ಸರ್ಕಾರ ತಾಕೀತು ಮಾಡಿದೆ.

‘ಡೆಲಿವರಿ ಶುಲ್ಕ, ಪ್ಯಾಕೇಜಿಂಗ್ ಶುಲ್ಕ, ತೆರಿಗೆ ಸೇರಿದಂತೆ ಎಲ್ಲ ಬಗೆಯ ಶುಲ್ಕಗಳ ವಿವರವನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತೋರಿಸಬೇಕು’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಸೂಚನೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ಒಂದು ವರ್ಷದ ಅವಧಿಯಲ್ಲಿ ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಯಲ್ಲಿ ಸ್ವಿಗ್ಗಿ ವಿರುದ್ಧ 3,631 ಹಾಗೂ ಜೊಮ್ಯಾಟೊ ವಿರುದ್ಧ 2,828 ದೂರುಗಳು ಬಂದಿವೆ ಎಂದು ಇಲಾಖೆಯು ಕಂಪನಿಗಳ ಪ್ರತಿನಿಧಿಗಳ ಜೊತೆ ನಡೆಸಿದ ಸಭೆಯಲ್ಲಿ ತಿಳಿಸಿದೆ.

ADVERTISEMENT

ಗ್ರಾಹಕರು ಒಪ್ಪಿಗೆ ನೀಡಿದಲ್ಲಿ ಅವರ ದೂರವಾಣಿ ಸಂಖ್ಯೆಯನ್ನು ರೆಸ್ಟಾರೆಂಟ್‌ಗಳ ಜೊತೆ ಹಂಚಿಕೊಳ್ಳಬೇಕು ಎಂದು ಕಂಪನಿಗಳಿಗೆ ಸಲಹೆ ನೀಡಲಾಗಿದೆ ಎಂದು ಕೂಡ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.