ADVERTISEMENT

ಕೇಂದ್ರ ಸರ್ಕಾರದಿಂದ ಆಕಸ್ಮಿಕ ಲಾಭ ತೆರಿಗೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 20:45 IST
Last Updated 3 ಆಗಸ್ಟ್ 2022, 20:45 IST
   

ನವದೆಹಲಿ: ಕೇಂದ್ರ ಸರ್ಕಾರವು ವಿಮಾನ ಇಂಧನ (ಎಟಿಎಫ್‌) ರಫ್ತು ಮೇಲಿನ ತೆರಿಗೆ ಕೈಬಿಟ್ಟಿದ್ದು, ಡೀಸೆಲ್‌ ರಫ್ತು ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದೆ. ಆದರೆ, ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆ ಪ್ರಮಾಣ ಹೆಚ್ಚಿಸಿದೆ.

ಡೀಸೆಲ್‌ ರಫ್ತು ಮೇಲಿನ ತೆರಿಗೆಯನ್ನು ಪ್ರತಿ ಲೀಟರಿಗೆ ₹ 11 ರಷ್ಟು ಇದ್ದಿದ್ದು ₹ 5ಕ್ಕೆ ಇಳಿಕೆ ಮಾಡಲಾಗಿದೆ. ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಪ್ರತಿ ಟನ್‌ಗೆ ₹ 17 ಸಾವಿರದಿಂದ ₹ 17,750ಕ್ಕೆ ಏರಿಕೆ ಮಾಡಲಾಗಿದೆ.

ದೇಶದ ವ್ಯಾಪಾರ ಕೊರತೆ ಅಂತರವು ಭಾರಿ ಹೆಚ್ಚಳ ಕಂಡಿರುವುದರಿಂದ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ.

ADVERTISEMENT

ಸರ್ಕಾರವು ಜುಲೈ 1 ರಂದು ರಫ್ತು ತೆರಿಗೆ ಮತ್ತು ಆಕಸ್ಮಿಕ ಲಾಭ ತೆರಿಗೆ ವಿಧಿಸಿತು. ಬಳಿಕ ಜುಲೈ 20ರಂದು ಕೆಲವೊಂದು ಬದಲಾವಣೆಗಳನ್ನು ಮಾಡಲಾಯಿತು. ಪೆಟ್ರೋಲ್‌ ಮೇಲಿನ ರಫ್ತು ತೆರಿಗೆಯನ್ನು ಕೈಬಿಡಲಾಯಿತು. ಡೀಸೆಲ್ ಮತ್ತು ಎಟಿಎಫ್‌ ರಫ್ತು ಮೇಲಿನ ತೆರಿಗೆಯನ್ನು ಪ್ರತಿ ಲೀಟರಿಗೆ ₹ 6ರಷ್ಟು ಕಡಿಮೆ ಮಾಡಲಾಯಿತು. ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ಪ್ರತಿ ಟನ್‌ಗೆ ₹ 23,250ರಷ್ಟು ವಿಧಿಸಿದ್ದ ಆಕಸ್ಮಿಕ ಲಾಭ ತೆರಿಗೆಯನ್ನು ₹ 17,750ಕ್ಕೆ ಏರಿಕೆ ಮಾಡಲಾಗಿತ್ತು. ಇದೀಗ ಎರಡನೇ ಬಾರಿಗೆ ತೆರಿಗೆ ದರಗಳಲ್ಲಿ ಬದಲಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.