ADVERTISEMENT

ಯುಪಿಎಸ್‌ ಕ್ಯಾಲ್ಕುಲೇಟರ್‌ ಬಿಡುಗಡೆ: ಡಿಎಫ್‌ಎಸ್‌

ಪಿಟಿಐ
Published 20 ಮೇ 2025, 15:56 IST
Last Updated 20 ಮೇ 2025, 15:56 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸರ್ಕಾರಿ ನೌಕರರು ಏಕೀಕೃತ ಪಿಂಚಣಿ ಯೋಜನೆಯಡಿ (ಯುಪಿಎಸ್‌) ತಮ್ಮ ಪಿಂಚಣಿ ಮೊತ್ತವನ್ನು ಲೆಕ್ಕಾಚಾರ ಮಾಡಲು ಅನುವಾಗುವಂತೆ ಕ್ಯಾಲ್ಕುಲೇಟರ್‌ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯು (ಡಿಎಫ್‌ಎಸ್‌) ಮಂಗಳವಾರ ತಿಳಿಸಿದೆ. 

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಟ್ರಸ್ಟ್‌ನ ವೆಬ್‌ಸೈಟ್‌ನಲ್ಲಿ ಈ ಸೌಲಭ್ಯ ಲಭ್ಯವಿದೆ. ಸರ್ಕಾರಿ ನೌಕರರು ‌ತಮ್ಮ ಜನ್ಮ ದಿನಾಂಕ, ಕೆಲಸಕ್ಕೆ ಸೇರಿದ ದಿನ ಸೇರಿ ಅಗತ್ಯ ಮಾಹಿತಿಯನ್ನು ನಮೂದಿಸಿ ನಿವೃತ್ತಿ ವೇಳೆಗೆ ಎಷ್ಟು ಪಿಂಚಣಿ ದೊರೆಯಲಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಇಲಾಖೆಯು ‘ಎಕ್ಸ್‌’ನಲ್ಲಿ ತಿಳಿಸಿದೆ. 

ಎನ್‌ಪಿಎಸ್‌ ಮತ್ತು ಯುಪಿಎಸ್‌ನಡಿ ಎರಡರಲ್ಲೂ ಎಷ್ಟು ಪಿಂಚಣಿ ಮೊತ್ತ ದೊರೆಯಲಿದೆ ಎಂಬುದನ್ನು ಲೆಕ್ಕ ಹಾಕಬಹುದಾಗಿದೆ. ಇದರಿಂದ ಚಂದಾದಾರರಿಗೆ ಸೂಕ್ತ ಪಿಂಚಣಿ ಯೋಜನೆಯ ಆಯ್ಕೆಗೆ ಸಹಕಾರಿಯಾಗಲಿದೆ ಎಂದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.