ಜಿಎಸ್‌ಟಿ
ನವದೆಹಲಿ: ಮಾಸಿಕ ಜಿಎಸ್‌ಟಿಆರ್–3ಬಿ ವಿವರ ಸಲ್ಲಿಸಲು ಇದ್ದ ಗಡುವನ್ನು ಅಕ್ಟೋಬರ್ 25ರವರೆಗೆ ವಿಸ್ತರಿಸಲಾಗಿದೆ. ತೆರಿಗೆ ವಿವರ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನವಾಗಿತ್ತು.
ಜಿಎಸ್‌ಟಿಆರ್–3ಬಿ ಎನ್ನುವುದು ಮಾಸಿಕ ಮತ್ತು ತ್ರೈಮಾಸಿಕ ವಿವರ ಸಲ್ಲಿಸುವುದಾಗಿದೆ. ವಿವಿಧ ವರ್ಗಗಳ ತೆರಿಗೆ ಪಾವತಿದಾರರು ಪ್ರತಿ ತಿಂಗಳ 20,22 ಮತ್ತು 24ರ ನಡುವೆ ತೆರಿಗೆ ವಿವರ ಸಲ್ಲಿಸುತ್ತಾರೆ.
ಸೆಪ್ಟೆಂಬರ್ ತಿಂಗಳು ಮತ್ತು ಸೆಪ್ಟೆಂಬರ್ ತ್ರೈಮಾಸಿಕಕ್ಕೆ ತೆರಿಗೆ ವಿವರ ಸಲ್ಲಿಸಲು ಇದ್ದ ಗಡುವನ್ನು ಅಕ್ಟೋಬರ್ 25ರವರೆಗೆ ವಿಸ್ತರಿಸಲಾಗಿದೆ ಎಂದು ಸಿಬಿಐಸಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಭಾನುವಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.