ADVERTISEMENT

ತೊಗರಿ, ಉದ್ದು: ಡಿ.31ರವರೆಗೆ ಉಚಿತ ಆಮದು

ಪಿಟಿಐ
Published 14 ಸೆಪ್ಟೆಂಬರ್ 2021, 18:02 IST
Last Updated 14 ಸೆಪ್ಟೆಂಬರ್ 2021, 18:02 IST

ನವದೆಹಲಿ: ಕೇಂದ್ರ ಸರ್ಕಾರವು ಉದ್ದು ಮತ್ತು ತೊಗರಿಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳುವ ಅವಧಿಯನ್ನು ಡಿಸೆಂಬರ್‌ 31ರವರೆಗೆ ವಿಸ್ತರಣೆ ಮಾಡಿದೆ. ಕೇಂದ್ರ ವಾಣಿಜ್ಯ ಸಚಿವಾಲಯವು ಈ ಕುರಿತು ಅಧಿಸೂಚನೆ ಹೊರಡಿಸಿದೆ.

ಈ ವರ್ಷದ ಮೇ ತಿಂಗಳಿನಲ್ಲಿ ಸರ್ಕಾರವು ಉದ್ದು ಮತ್ತು ತೊಗರಿಯ ಆಮದನ್ನು ನಿರ್ಬಂಧಿತ ವರ್ಗದಿಂದ ‘ಉಚಿತ’ ವರ್ಗಕ್ಕೆ ಬದಲಾಯಿಸಿತ್ತು. ನಿರ್ಬಂಧಿತ ವರ್ಗದಲ್ಲಿ ಆಮದು ಮಾಡಿಕೊಳ್ಳಲು ಅನುಮತಿ ಅಥವಾ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT