ADVERTISEMENT

ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್‌: 2022ರ ಫೆಬ್ರುವರಿ 28ರವರೆಗೆ ಅವಕಾಶ

ಪಿಟಿಐ
Published 30 ಡಿಸೆಂಬರ್ 2021, 13:00 IST
Last Updated 30 ಡಿಸೆಂಬರ್ 2021, 13:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ವಾರ್ಷಿಕ ರಿಟರ್ನ್ಸ್‌ ಸಲ್ಲಿಸಲು ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರವು 2022ರ ಫೆಬ್ರುವರಿ 28ರವರೆಗೆ ವಿಸ್ತರಣೆ ಮಾಡಿದೆ.

2020–21ನೇ ಹಣಕಾಸು ವರ್ಷಕ್ಕೆ ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್‌ ಸಲ್ಲಿಸಲು 2021ರ ಡಿಸೆಂಬರ್‌ 31ರ ಗಡುವು ಇತ್ತು. ಅದನ್ನು 2022ರ ಫೆಬ್ರುವರಿ 28ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಬುಧವಾರ ತಡರಾತ್ರಿ ಟ್ವೀಟ್‌ ಮಾಡಿದೆ.

ಜಿಎಸ್‌ಟಿಆರ್-9 ಎಂಬುದು ವಾರ್ಷಿಕ ರಿಟರ್ನ್ಸ್ ಆಗಿದೆ. ಜಿಎಸ್‌ಟಿಆರ್‌–9 ಮತ್ತು ಲೆಕ್ಕಪರಿಶೋಧಿತ ವಾರ್ಷಿಕ ಹಣಕಾಸು ಮಾಹಿತಿಯ ಸಮನ್ವಯದ ಸ್ವರೂಪವೇ ಜಿಎಸ್‌ಟಿಆರ್‌–9ಸಿ.

ADVERTISEMENT

ಜಿಎಸ್‌ಟಿ ಪಾವತಿಸುವವರ ವಾರ್ಷಿಕ ವಹಿವಾಟು ಮೊತ್ತವು ₹ 2 ಕೋಟಿಗಿಂತಲೂ ಹೆಚ್ಚಿಗೆ ಇದ್ದರೆ ಅಂತವರು ‘ಜಿಎಸ್‌ಟಿಆರ್-9’ ಸಲ್ಲಿಸುವುದು ಕಡ್ಡಾಯ. ವಾರ್ಷಿಕ ವಹಿವಾಟು ಮೊತ್ತವು ₹ 5 ಕೋಟಿಗಿಂತ ಹೆಚ್ಚಿಗೆ ಇರುವವರು ‘ಜಿಎಸ್‌ಟಿಆರ್‌–9ಸಿ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.