ADVERTISEMENT

ನೈಸರ್ಗಿಕ ಅನಿಲದ ಬೆಲೆ ಶೇ 62ರಷ್ಟು ಹೆಚ್ಚಳ

ಪಿಟಿಐ
Published 30 ಸೆಪ್ಟೆಂಬರ್ 2021, 16:20 IST
Last Updated 30 ಸೆಪ್ಟೆಂಬರ್ 2021, 16:20 IST
   

ನವದೆಹಲಿ: ವಿದ್ಯುತ್ ಉತ್ಪಾದನೆ, ರಸಗೊಬ್ಬರ ತಯಾರಿಕೆ, ಸಿಎನ್‌ಜಿ ಉತ್ಪಾದನೆಯಲ್ಲಿ ಬಳಸುವ ನೈಸರ್ಗಿಕ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರವು ಗುರುವಾರ ಶೇಕಡ 62ರಷ್ಟು ಹೆಚ್ಚಳ ಮಾಡಿದೆ.

2019ರ ಏಪ್ರಿಲ್‌ ನಂತರದಲ್ಲಿ ಆಗಿರುವ ಮೊದಲ ಬೆಲೆ ಏರಿಕೆ ಇದು. ಈ ಬೆಲೆ ಏರಿಕೆಯ ಪರಿಣಾಮವಾಗಿ ಸಿಎನ್‌ಜಿ ಬೆಲೆಯಲ್ಲಿ ಶೇಕಡ 10ರಿಂದ ಶೇ 11ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಅಲ್ಲದೆ, ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ಮನೆಗಳಿಗೆ ಕೊಳವೆ ಮೂಲಕ ಪೂರೈಕೆ ಮಾಡುವ ಅಡುಗೆ ಅನಿಲದ ಬೆಲೆಯಲ್ಲಿ ಕೂಡ ಇದೇ ಪ್ರಮಾಣದಲ್ಲಿ ಏರಿಕೆ ಆಗಬಹುದು ಎನ್ನಲಾಗಿದೆ.

ವಿದ್ಯುತ್ ಉತ್ಪಾದನೆಯ ವೆಚ್ಚದಲ್ಲಿ ಕೂಡ ಹೆಚ್ಚಳ ಆಗುವ ಸಾಧ್ಯತೆ ಇದೆ. ಆದರೆ, ಅನಿಲದಿಂದ ಉತ್ಪಾದನೆ ಆಗುವ ವಿದ್ಯುತ್ತಿನ ಪ್ರಮಾಣ ತೀರಾ ಕಡಿಮೆ ಇರುವ ಕಾರಣ ವಿದ್ಯುತ್ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿಕ್ಕಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರಸಗೊಬ್ಬರ ತಯಾರಿಕೆಯ ವೆಚ್ಚ ಕೂಡ ಹೆಚ್ಚಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.