ADVERTISEMENT

ಗ್ರಾಹಕರಿಗೆ ಜಿಎಸ್‌ಟಿ ಲಾಟರಿ ಕೇಂದ್ರ ಸರ್ಕಾರದ ಚಿಂತನೆ

ಪಿಟಿಐ
Published 4 ಫೆಬ್ರುವರಿ 2020, 17:09 IST
Last Updated 4 ಫೆಬ್ರುವರಿ 2020, 17:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗ್ರಾಹಕರು ಪ್ರತಿ ಖರೀದಿಗೂ ಬಿಲ್‌ ಪಡೆಯುವಂತೆ ಉತ್ತೇಜಿಸಲು ಕೇಂದ್ರ ಸರ್ಕಾರ ₹ 10 ಲಕ್ಷದಿಂದ ₹ 1 ಕೋಟಿಯವರೆಗಿನ ಮೊತ್ತದ ಲಾಟರಿ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ.

‘ಜಿಎಸ್‌ಟಿ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಪ್ರತಿಯೊಂದು ಬಿಲ್‌ ಪಡೆದಾಗಲೂ ಲಾಟರಿ ಗೆಲ್ಲುವ ಅವಕಾಶ ಸಿಗಲಿದೆ. ತೆರಿಗೆ ಪಾವತಿಸುವುದಕ್ಕೆ ಉತ್ತೇಜನ ನೀಡಲಿದೆ’ ಎಂದು ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯ ಸದಸ್ಯ ಜಾನ್‌ ಜೋಸೆಫ್‌ ತಿಳಿಸಿದ್ದಾರೆ.

‘ಗ್ರಾಹಕರ ಮನಸ್ಥಿತಿಯಲ್ಲಿ ಬದಲಾವಣೆ ತರಲು ಹೊಸ ಲಾಟರಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಗ್ರಾಹಕರು ಖರೀದಿಸಿದ ಸರಕುಗಳ ಬಿಲ್‌ ಪಡೆದಾಗ ಅದನ್ನು ಜಿಎಸ್‌ಟಿ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲಾಗುವುದು, ಸ್ವಯಂಚಾಲಿತವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ನೇತೃತ್ವದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ. ಕನಿಷ್ಠ ಎಷ್ಟು ಮೊತ್ತದ ಬಿಲ್‌ಗೆ ಲಾಟರಿ ಅನ್ವಯಾಗಲಿದೆ ಎನ್ನುವುದನ್ನು ಮಂಡಳಿ ನಿರ್ಧರಿಸಲಿದೆ. ಗ್ರಾಹಕ ಕ್ಷೇಮಾಭಿವೃದ್ಧಿ ನಿಧಿಯನ್ನು ಇದಕ್ಕೆ ಬಳಸಲಾಗುವುದು’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.