US tariffs
ನವದೆಹಲಿ: ಅಮೆರಿಕವು ವಿಧಿಸಿರುವ ಸುಂಕದ ಪರಿಣಾಮವು ಹೆಚ್ಚು ಇರಲಿರುವ ಜವಳಿ ಹಾಗೂ ರಾಸಾಯನಿಕಗಳ ವಲಯಗಳಿಗೆ ರಫ್ತು ಉತ್ತೇಜನಾ ಮಿಷನ್ ಅಡಿಯಲ್ಲಿ ಕೇಂದ್ರ ಸರ್ಕಾರವು ಆದ್ಯತೆಯ ಮೇರೆಗೆ ನೆರವು ಒದಗಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಸುಂಕದ ಪರಿಣಾಮಗಳನ್ನು ಅಂದಾಜು ಮಾಡಲು, ನೆರವು ಕ್ರಮಗಳು ಏನಿರಬೇಕು ಎಂಬುದನ್ನು ಅರಿಯಲು ಜವಳಿ ಹಾಗೂ ರಾಸಾಯನಿಕಗಳ ರಫ್ತುದಾರರ ಜೊತೆ ವಾಣಿಜ್ಯ ಸಚಿವಾಲಯವು ನಡೆಸಿದ ಸಮಾಲೋಚನಾ ಸಭೆಯಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ ಆಗಿದೆ ಎಂದು ಗೊತ್ತಾಗಿದೆ.
ಬಜೆಟ್‌ನಲ್ಲಿ ಘೋಷಿಸಿರುವ ರಫ್ತು ಉತ್ತೇಜನಾ ಮಿಷನ್ ಕುರಿತು ಕೇಂದ್ರ ಸರ್ಕಾರ ಕಡೆಯಿಂದ ಕೆಲಸಗಳು ನಡೆದಿವೆ. ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ ಸುಲಭವಾಗಿ ಸಾಲ ಕೊಡಿಸುವುದು ಹಾಗೂ ದೇಶದ ಹೊರಗೆಯೂ ಗೋದಾಮು ಸೇವೆ ಒದಗಿಸುವ ಕ್ರಮಗಳನ್ನು ಈ ಮಿಷನ್ ಒಳಗೊಳ್ಳುವ ನಿರೀಕ್ಷೆ ಇದೆ.
ರಫ್ತುದಾರರು ಹೊಸ ಮಾರುಕಟ್ಟೆಗಳನ್ನು ಹುಡುಕುವ ಕೆಲಸವನ್ನೂ ಶುರು ಮಾಡಿದ್ದಾರೆ ಎಂದು ಉದ್ಯಮದ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.