ADVERTISEMENT

ತೊಗರಿ ಕಸ್ಟಮ್ಸ್‌ ಸುಂಕ ರದ್ದು

ಪಿಟಿಐ
Published 5 ಮಾರ್ಚ್ 2023, 15:23 IST
Last Updated 5 ಮಾರ್ಚ್ 2023, 15:23 IST
   

ನವದೆಹಲಿ (ಪಿಟಿಐ): ತೊಗರಿಯ ಬೆಲೆ ಏರಿಕೆಯನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು, ಇದರ ಆಮದಿನ ಮೇಲೆ ಇದ್ದ ಶೇಕಡ 10ರಷ್ಟು ಮೂಲ ಕಸ್ಟಮ್ಸ್ ಸುಂಕವನ್ನು ತೆಗೆದಿದೆ.

ತೊಗರಿಯ ಆಮದಿನ ಮೇಲಿನ ಸುಂಕವನ್ನು ಶೂನ್ಯಕ್ಕೆ ತರಲಾಗಿದೆ ಎಂದು ಮಾರ್ಚ್‌ 3ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಪರೋಕ್ಷ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಐಸಿ) ಹೇಳಿದೆ. ಇದು ಶನಿವಾರದಿಂದ ಜಾರಿಗೆ ಬಂದಿದೆ.

ಆದರೆ, ತೊಗರಿ ಹೊರತುಪಡಿಸಿ, ತೊಗರಿ ಬೇಳೆಯ ಆಮದಿಗೆ ಶೇ 10ರಷ್ಟು ಮೂಲ ಕಸ್ಟಮ್ಸ್ ಸುಂಕ ಮುಂದುವರಿಯಲಿದೆ. ದೇಶದಲ್ಲಿ ಈ ಬಾರಿ ತೊಗರಿ ಉತ್ಪಾದನೆ ಕಡಿಮೆ ಆಗಬಹುದು ಎಂಬ ಅಂದಾಜಿನ ನಂತರದಲ್ಲಿ, ತೊಗರಿ ಆಮದಿಗೆ ಸುಂಕ ರದ್ದು ಮಾಡಲಾಗಿದೆ.

ADVERTISEMENT

ದೇಶದಲ್ಲಿ ತೊಗರಿ ಕೊರತೆ ಉಂಟಾಗಬಹುದು ಎಂಬ ಅಂದಾಜಿನಲ್ಲಿ ಕೇಂದ್ರವು, ಉತ್ತಮ ಗುಣಮಟ್ಟದ 10 ಲಕ್ಷ ಟನ್ ತೊಗರಿ ಬೇಳೆಯನ್ನು ಆಮದು ಮಾಡಿಕೊಳ್ಳಲು ಯೋಜನೆ ಹೊಂದಿರುವುದಾಗಿ ಜನವರಿಯಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.