ADVERTISEMENT

ಟಾಟಾ ಕಮ್ಯುನಿಕೇಷನ್ಸ್‌ನಲ್ಲಿನ ಷೇರು ಮಾರಲು ಕೇಂದ್ರ ತೀರ್ಮಾನ

ಪಿಟಿಐ
Published 19 ಜನವರಿ 2021, 17:04 IST
Last Updated 19 ಜನವರಿ 2021, 17:04 IST

ನವದೆಹಲಿ: ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್ (ಟಿಸಿಎಲ್) ಕಂಪನಿಯಲ್ಲಿ ತಾನು ಹೊಂದಿರುವ ಶೇಕಡ 26.12ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಷೇರುಗಳ ಮಾರಾಟವು ಮಾರ್ಚ್‌ 20ರೊಳಗೆ ಪೂರ್ಣಗೊಳ್ಳಲಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಹೇಳಿದೆ. ಟಿಸಿಎಲ್‌ ಕಂಪನಿಯ ಷೇರು ಮೌಲ್ಯ ಮಂಗಳವಾರ ₹ 1,129.95 ಆಗಿತ್ತು. ಈಗಿನ ಮಾರುಕಟ್ಟೆ ಬೆಲೆಯಲ್ಲಿ ಸರ್ಕಾರವು ಶೇ 26.12ರಷ್ಟು ಷೇರುಗಳ ಮಾರಾಟದ ಮೂಲಕ ₹ 8,400 ಕೋಟಿ ಸಂಗ್ರಹಿಸಬಹುದು.

ಸರ್ಕಾರಿ ಸ್ವಾಮ್ಯದಲ್ಲಿ ಇದ್ದ ವಿಎಸ್‌ಎನ್‌ಎಲ್‌ ಕಂಪನಿಯಲ್ಲಿನ ಶೇ 25ರಷ್ಟು ಷೇರುಗಳನ್ನು 2002ರಲ್ಲಿ ಪೆನಾಟೋನ್ ಫಿನ್‌ವೆಸ್ಟ್‌ ಲಿಮಿಟೆಡ್‌ಗೆ ಮಾರಾಟ ಮಾಡಲಾಗಿತ್ತು. ಆಗ ಕಂಪನಿಯ ಆಡಳಿತ ನಿರ್ವಹಣೆಯ ಹೊಣೆಯನ್ನೂ ವರ್ಗಾವಣೆ ಮಾಡಲಾಯಿತು. ನಂತರದಲ್ಲಿ ವಿಎಸ್‌ಎನ್‌ಎಲ್‌ ಎಂಬ ಹೆಸರನ್ನು ‘ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್’ ಎಂದು ಬದಲಾಯಿಸಲಾಯಿತು. ಟಿಸಿಎಲ್ ಕಂಪನಿಯಲ್ಲಿ ಟಾಟಾ ಸನ್ಸ್ ಕೂಡ ಪಾಲು ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.