ADVERTISEMENT

ಜುಲೈ 1ರಿಂದ ಬದಲಾಗುವ ಬಡ್ಡಿದರದ ಉಳಿತಾಯ ಬಾಂಡ್‌

ಪಿಟಿಐ
Published 27 ಜೂನ್ 2020, 16:28 IST
Last Updated 27 ಜೂನ್ 2020, 16:28 IST
ಉಳಿತಾಯ
ಉಳಿತಾಯ   

ನವದೆಹಲಿ: ಕೇಂದ್ರ ಸರ್ಕಾರವು ಬದಲಾಗುವ ಬಡ್ಡಿದರದ ಉಳಿತಾಯ (ತೆರಿಗೆಗೆ ಒಳಪಡುವ) ಬಾಂಡ್‌ಗಳನ್ನು ಜುಲೈ 1ರಿಂದ ಬಿಡುಗಡೆ ಮಾಡಲು ನಿರ್ಧರಿಸಿದೆ.

ಶೇ 7.75ರ ಬಡ್ಡಿದರದ ಉಳಿತಾಯ (ತೆರಿಗೆಗೆ ಒಳಪಟ್ಟ) ಬಾಂಡ್‌ಗಳನ್ನು ವಾಪಸ್‌ ಪಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಲು ಮುಂದಾಗಿದೆ.

ಆದರೆ ಹೊಸ ಯೋಜನೆಯಲ್ಲಿ ಬಡ್ಡಿದರವು ಶೇ 7.15ರಷ್ಟಿರಲಿದೆ. ಪ್ರತಿ ಆರು ತಿಂಗಳಿಗೊಮ್ಮೆ ಬಡ್ಡಿದರದಲ್ಲಿ ಬದಲಾವಣೆ ಆಗಲಿದೆ.ಜನವರಿ 1 ಮತ್ತು ಜುಲೈ 1ಕ್ಕೆ ಬಡ್ಡಿದರ ಸಿಗಲಿದೆ. ಮೊದಲ ಆರು ತಿಂಗಳಿಗೆ ಶೇ 7.15ರ ಬಡ್ಡಿದರ ಇರಲಿದೆ. ನಂತರದ ಆರು ತಿಂಗಳಿಗೆ ಬದಲಾಗಲಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ADVERTISEMENT

1961ರ ಆದಾಯ ತೆರಿಗೆ ಕಾಯ್ದೆಯ ಅನ್ವಯ ಬಡ್ಡಿದರಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಏಳು ವರ್ಷಗಳ ನಂತರ ಬಾಂಡ್‌ಗಳಲ್ಲಿ ತೊಡಗಿಸಿದ ಹಣವನ್ನು ಸರ್ಕಾರ ಹೂಡಿಕೆದಾರರಿಗೆ ಮರಳಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.