ADVERTISEMENT

ಪೆಟ್ರೋಲ್‌ ಪಂಪ್‌ ಪರವಾನಗಿ ನಿಯಮ ಸಡಿಲಿಕೆ?

ಪಿಟಿಐ
Published 10 ಆಗಸ್ಟ್ 2025, 13:58 IST
Last Updated 10 ಆಗಸ್ಟ್ 2025, 13:58 IST
Petrol
Petrol   

ನವದೆಹಲಿ (ಪಿಟಿಐ): ದೇಶದಲ್ಲಿ ಪೆಟ್ರೋಲ್‌ ಪಂಪ್‌ಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ಸಡಿಲಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಕೇಂದ್ರವು ಈ ನಿಯಮಗಳನ್ನು 2019ರಲ್ಲಿ ಸಡಿಲಿಸಿತ್ತು. ತೈಲ ಮಾರಾಟ ಕ್ಷೇತ್ರ ಪ್ರವೇಶಿಸಲು ತೈಲೋತ್ಪನ್ನಗಳ ಕಂಪನಿಗಳು ಮಾತ್ರವಲ್ಲದೆ ಇತರ ಕಂಪನಿಗಳಿಗೂ ಅವಕಾಶ ಕಲ್ಪಿಸಿತ್ತು.

ಆ ಸಂದರ್ಭದಲ್ಲಿ, ತೈಲೋತ್ಪನ್ನಗಳ ರಿಟೇಲ್‌ ಮಾರಾಟಕ್ಕೆ ಅನುಮತಿ ಬಯಸುವ ಕಂಪನಿಗಳು ಕನಿಷ್ಠ ₹250 ಕೋಟಿ ಮೌಲ್ಯ ಹೊಂದಿರಬೇಕು ಎಂದು ನಿಯಮದಲ್ಲಿ ಹೇಳಲಾಗಿತ್ತು. ಆದರೆ ಹೀಗೆ ರಿಟೇಲ್‌ ಮಾರಾಟ ಕ್ಷೇತ್ರ ಪ್ರವೇಶಿಸುವ ಕಂಪನಿಗಳು, ಮೂರು ವರ್ಷದೊಳಗೆ ಹೊಸ ಕಾಲದ ಪರ್ಯಾಯ ಇಂಧನ (ಸಿಎನ್‌ಜಿ, ಎಲ್‌ಎನ್‌ಜಿ, ಜೈವಿಕ ಇಂಧ, ಇ.ವಿ. ಚಾರ್ಜಿಂಗ್) ಮಾರಾಟವನ್ನೂ ಶುರುಮಾಡುವ ಮಾತು ಕೊಡಬೇಕಿತ್ತು.

ADVERTISEMENT

ರಿಟೇಲ್‌ ಮಾತ್ರವಲ್ಲದೆ, ಪೆಟ್ರೋಲ್ ಹಾಗೂ ಡೀಸೆಲ್‌ನ ಸಗಟು ಮಾರಾಟದಲ್ಲೂ ತೊಡಗಲು ಬಯಸುವ ಕಂಪನಿಗಳು ಕನಿಷ್ಠ ₹500 ಕೋಟಿ ಮೌಲ್ಯ ಹೊಂದಿರಬೇಕಿತ್ತು. 2019ರ ಈ ನಿಯಮಗಳನ್ನು ಪುನರ್ ಪರಿಶೀಲಿಸಲು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ತಜ್ಞರ ಸಮಿತಿಯೊಂದನ್ನು ರಚಿಸಿದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ಮಾರುಕಟ್ಟೆ ವಿಭಾಗದ ಮಾಜಿ ನಿರ್ದೇಶಕ ಸುಖಮಲ್ ಜೈನ್ ಅವರು ಈ ಸಮಿತಿಯ ನೇತೃತ್ವ ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.