ADVERTISEMENT

‘ಹಿಂದುಸ್ಥಾನ್‌ ಜಿಂಕ್‌ನಲ್ಲಿನ ಷೇರು ಮಾರಾಟಕ್ಕೆ ಸಿದ್ಧತೆ’

ಪಿಟಿಐ
Published 2 ಫೆಬ್ರುವರಿ 2023, 17:06 IST
Last Updated 2 ಫೆಬ್ರುವರಿ 2023, 17:06 IST

ನವದೆಹಲಿ: ಹಿಂದುಸ್ಥಾನ್‌ ಜಿಂಕ್‌ ಲಿಮಿಟೆಡ್‌ನಲ್ಲಿ (ಎಚ್‌ಜೆಡ್‌ಎಲ್‌) ಕೇಂದ್ರ ಸರ್ಕಾರವು ಹೊಂದಿರುವ ಷೇರುಗಳಲ್ಲಿ ಕೆಲವೊಂದಿಷ್ಟನ್ನು ಮುಂದಿನ ತಿಂಗಳು ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ಗುರುವಾರ ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದಿಂದ ₹ 50 ಸಾವಿರ ಕೋಟಿ ಸಂಗ್ರಹಿಸುವ ಪರಿಷ್ಕೃತ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಇದಕ್ಕೆ ಪೂರಕವಾಗಿ ಈ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ₹ 31,100 ಕೋಟಿ ಸಂಗ್ರಹ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT