ಸಾಂದರ್ಭಿಕ ಚಿತ್ರ
ನವದೆಹಲಿ: ಜುಲೈ ತಿಂಗಳಿನಲ್ಲಿ ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ₹1.96 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
ಇದು ಹಿಂದಿನ ವರ್ಷದ ಜುಲೈ ತಿಂಗಳಲ್ಲಿ ಆಗಿದ್ದ ವರಮಾನ ಸಂಗ್ರಹಕ್ಕೆ ಹೋಲಿಸಿದರೆ ಶೇಕಡ 7.5ರಷ್ಟು ಹೆಚ್ಚು ಎಂದು ತಿಳಿಸಿದೆ.
2024ರ ಜುಲೈನಲ್ಲಿ ₹1.82 ಲಕ್ಷ ಕೋಟಿ ಸಂಗ್ರಹವಾಗಿತ್ತು. ಪ್ರಸಕ್ತ ವರ್ಷದ ಜೂನ್‌ನಲ್ಲಿ ₹1.84 ಲಕ್ಷ ಕೋಟಿ ಸಂಗ್ರಹವಾಗಿದೆ. ಏಪ್ರಿಲ್‌ನಲ್ಲಿ ದಾಖಲೆಯ ₹2.37 ಲಕ್ಷ ಕೋಟಿ ಸಂಗ್ರಹವಾಗಿತ್ತು. ದೇಶಿ ವಹಿವಾಟುಗಳ ಮೂಲಕ ಸಂಗ್ರಹವಾದ ಜಿಎಸ್‌ಟಿ ವರಮಾನ ಶೇ 6.7ರಷ್ಟು ಹೆಚ್ಚಳವಾಗಿದ್ದು, ₹1.43 ಲಕ್ಷ ಕೋಟಿಯಾಗಿದೆ. ಆಮದು ವಹಿವಾಟು ಮೂಲಕ ₹52,712 ಕೋಟಿ ಸಂಗ್ರಹವಾಗಿದೆ. ಜಿಎಸ್‌ಟಿ ಮರುಪಾವತಿ ಮೊತ್ತ ಶೇ 66ರಷ್ಟು ಹೆಚ್ಚಳವಾಗಿದ್ದು, ₹27,147 ಕೋಟಿಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.