ADVERTISEMENT

ಜಿಎಸ್‌ಟಿ ವಂಚನೆ ಪ್ರಕರಣ: ಇನ್ಫೊಸಿಸ್‌ಗೆ ನೀಡಿದ್ದ ಷೋಕಾಸ್ ನೋಟಿಸ್‌ ಮುಕ್ತಾಯ

ಪಿಟಿಐ
Published 7 ಜೂನ್ 2025, 14:18 IST
Last Updated 7 ಜೂನ್ 2025, 14:18 IST
ಇನ್ಫೊಸಿಸ್‌
ಇನ್ಫೊಸಿಸ್‌   

ನವದೆಹಲಿ: ₹32,403 ಕೋಟಿ ಜಿಎಸ್‌ಟಿಗೆ ಸಂಬಂಧಿಸಿ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯವು(ಡಿಜಿಜಿಐ) ಕಂಪನಿ ವಿರುದ್ಧದ ಷೋಕಾಸ್‌ ನೋಟಿಸ್‌ ಪೂರ್ವ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿದೆ ಎಂದು ಐಟಿ ಕಂಪನಿ ಇನ್ಫೊಸಿಸ್‌ ಹೇಳಿದೆ.

‘ಈ ಕುರಿತು ಡಿಜಿಜಿಐ ಮಾಹಿತಿ ನೀಡಿದೆ. ಇದರೊಂದಿಗೆ, ಜಿಎಸ್‌ಟಿಗೆ ಸಂಬಂಧಿಸಿದ ಪ್ರಕರಣ ಮುಕ್ತಾಯಗೊಂಡಂತಾಗಿದೆ’ ಎಂದು ಷೇರುಪೇಟೆಗೆ ಇನ್ಫೊಸಿಸ್‌ ತಿಳಿಸಿದೆ.

2018–19ರಿಂದ 2021–22ರ ಆರ್ಥಿಕ ವರ್ಷದವರೆಗಿನ ₹32,403 ಕೋಟಿ ಜಿಎಸ್‌ಟಿ ಮೊತ್ತ ಪಾವತಿಗೆ ಸಂಬಂಧಿಸಿ, ಕಂಪನಿ ವಿರುದ್ಧ ಡಿಜಿಜಿಐ ಷೋಕಾಸ್‌ ನೋಟಿಸ್‌ ಪೂರ್ವ ಪ್ರಕ್ರಿಯೆ ಆರಂಭಿಸಿತ್ತು.

ADVERTISEMENT

‘2017ರ ಜುಲೈನಿಂದ 2022ರ ಮಾರ್ಚ್‌ವರೆಗೆ ವಿದೇಶಗಳಲ್ಲಿನ ತನ್ನ ಶಾಖೆಗಳ ಒದಗಿಸಿದ ಸೇವೆಗಳಿಗೆ ಸಂಬಂಧಿಸಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ಪಾವತಿ ಕುರಿತಂತೆ ಕಳೆದ ವರ್ಷ ಆಗಸ್ಟ್‌ 3ರಂದು  ಕಂಪನಿಗೆ ಡಿಜಿಜಿಐ ನೋಟಿಸ್‌ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಲಾಗಿದೆ’ ಎಂದೂ ಇನ್ಫೊಸಿಸ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.