ADVERTISEMENT

ಜಿಎಸ್‌ಟಿ ವರಮಾನದಲ್ಲಿ ಕುಸಿತ

ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ₹ 8.71 ಲಕ್ಷ ಕೋಟಿ ಸಂಗ್ರಹ

ಪಿಟಿಐ
Published 1 ಜನವರಿ 2019, 17:35 IST
Last Updated 1 ಜನವರಿ 2019, 17:35 IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಡಿಸೆಂಬರ್‌ ತಿಂಗಳಲ್ಲಿ ₹ 94,726 ಕೋಟಿಗಳಷ್ಟಾಗಿದೆ.

ನವೆಂಬ ₹ 97,637 ಕೋಟಿಗಳಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿನ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಡಿಸೆಂಬರ್‌ 30ರವರೆಗೆ ಸಲ್ಲಿಸಲಾದ ಒಟ್ಟು ಮಾರಾಟ ರಿಟರ್ನ್ಸ್‌ಗಳ ಸಂಖ್ಯೆಯು (ಜಿಎಸ್‌ಟಿಆರ್‌–3ಬಿ) 72.44 ಲಕ್ಷಗಳಷ್ಟಿದೆ. ಸಂಗ್ರಹವಾದ ₹ 94,726 ಕೋಟಿ ತೆರಿಗೆ ಮೊತ್ತದಲ್ಲಿ ಕೇಂದ್ರೀಯ ಜಿಎಸ್‌ಟಿ (ಸಿಜಿಎಸ್‌ಟಿ) ₹ 16,442 ಕೋಟಿ, ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) ₹ 22,459 ಕೋಟಿ, ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ) ₹ 47,936 ಕೋಟಿ ಮತ್ತು ₹ 7,889 ಕೋಟಿ ಸೆಸ್‌ ಇದೆ.

ಆಗಸ್ಟ್‌ – ಸೆಪ್ಟೆಂಬರ್‌ ಅವಧಿಯಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾದ ಪರಿಹಾರದ ಮೊತ್ತವು ₹ 11,922 ಕೋಟಿಗಳಷ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.