ADVERTISEMENT

₹ 34 ಕೋಟಿ ಮೊತ್ತದ ‘ಐಟಿಸಿ’ ವಂಚನೆ ಪತ್ತೆ: ಹಣಕಾಸು ಸಚಿವಾಲಯ

ಪಿಟಿಐ
Published 14 ನವೆಂಬರ್ 2021, 13:49 IST
Last Updated 14 ನವೆಂಬರ್ 2021, 13:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಏಳು ನಕಲಿ ಕಂಪನಿಗಳನ್ನು ಸೃಷ್ಟಿಸುವ ಮೂಲಕ ₹ 34 ಕೋಟಿ ಮೊತ್ತದ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ವಂಚನೆ ಮಾಡಿರುವ ಪ್ರಕರಣವನ್ನು ಜಿಎಸ್‌ಟಿ ಅಧಿಕಾರಿಗಳು ಭೇದಿಸಿದ್ದಾರೆ ಎಂದು ಹಣಕಾಸು ಸಚಿವಾಲಯವು ಭಾನುವಾರ ತಿಳಿಸಿದೆ.

ಸರಕುಗಳನ್ನು ಮಾರಾಟ ಮಾಡದೇ ಐಟಿಸಿ ವಂಚನೆ ಮಾಡುವ ಉದ್ದೇಶದಿಂದ ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ ಸಿದ್ಧಪಡಿಸಲು ಏಳು ಕಂಪನಿಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದೆ.

ದೆಹಲಿ ಪೂರ್ವ ವಿಭಾಗದ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಆಯುಕ್ತರ ಕಚೇರಿಯ ಅಧಿಕಾರಿಗಳು ಈ ವಂಚನೆ ಪ್ರಕರಣವನ್ನು ಭೇದಿಸಿದ್ದಾರೆ. ಈ ಏಳು ಕಂಪನಿಗಳು ₹ 220 ಕೋಟಿ ಮೊತ್ತದ ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ ಸೃಷ್ಟಿಸಿದ್ದು, ₹ 34 ಕೋಟಿ ಮೊತ್ತವನ್ನು ಐಟಿಸಿ ರೂಪದಲ್ಲಿ ವರ್ಗಾವಣೆ ಮಾಡಿವೆ.

ADVERTISEMENT

ನಕಲಿ ಕಂಪನಿಗಳ ಸೃಷ್ಟಿ ಮತ್ತು ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ ಸೃಷ್ಟಿಸಿ ಮಾರಾಟ ಮಾಡುವುದರ ಹಿಂದಿನ ಸೂತ್ರಧಾರಿ ರಿಷಬ್‌ ಜೈನ್‌ ಅವರನ್ನು ಶನಿವಾರ ಬಂಧಿಸಲಾಗಿದ್ದು, ನವೆಂಬರ್‌ 26ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.