ADVERTISEMENT

4.7 ಕೋಟಿ ಟನ್‌ ಉತ್ಪಾದನೆ: ಎನ್‌ಎಂಡಿಸಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 12:19 IST
Last Updated 2 ಅಕ್ಟೋಬರ್ 2021, 12:19 IST

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ 4.7 ಕೋಟಿ ಟನ್‌ಗಳಷ್ಟು ಉತ್ಪಾದನೆಯ ಗುರಿ ತಲುಪುವ ನಿರೀಕ್ಷೆಯನ್ನು ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿ ಹೊಂದಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಕಂಪನಿಯ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಎನ್‌ಎಂಡಿಸಿ ಅಧ್ಯಕ್ಷ ಸುಮಿತ್ ದೇಬ್‌ ಅವರು, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 89.1 ಲಕ್ಷ ಟನ್‌ ಉತ್ಪದನೆ ಮತ್ತು 94.5 ಲಕ್ಷ ಟನ್‌ ಮಾರಾಟವನ್ನು ಸಾಧಿಸಲಾಗಿದೆ. ಇದು ಈವರೆಗಿನ ದಾಖಲೆಯಾಗಿದೆ. ಕಾರ್ಯಾಚರಣೆಯ ಒಟ್ಟಾರೆ ವರಮಾನವು ₹6,512 ಕೋಟಿಗಳಷ್ಟಿದ್ದು, ಇದುವರೆಗೆ ಗರಿಷ್ಠ ಮಟ್ಟವಾಗಿದೆ ಎಂದು ಮಾಹಿತಿ ನೀಡಿದರು.

ಐಟಿ ಮತ್ತು ಡಿಜಿಟಲೀಕರಣವು ಕಂಪನಿಯ ಕಾರ್ಯತಂತ್ರದ ಆದ್ಯತೆಯಾಗಿದೆ. ತಂತ್ರಜ್ಞಾನ, ಸ್ವಯಂಚಾಲನೆ ಮತ್ತು ದತ್ತಾಂಶ ವಿಶ್ಲೇಷಣೆಗಳು ನಮ್ಮ ವ್ಯವಹಾರದ ಎಲ್ಲಾ ಅಂಶಗಳನ್ನು ಮರುಶೋಧಿಸುತ್ತವೆ ಎನ್ನುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.