ADVERTISEMENT

24ರಿಂದ ಎಚ್‌ಡಿಬಿ ಫೈನಾನ್ಶಿಯಲ್‌ ಸರ್ವಿಸಸ್‌ ಐಪಿಒ

ಪಿಟಿಐ
Published 19 ಜೂನ್ 2025, 15:36 IST
Last Updated 19 ಜೂನ್ 2025, 15:36 IST
ಎಚ್‌ಡಿಬಿ ಫೈನಾನ್ಶಿಯಲ್‌ ಸರ್ವಿಸಸ್‌
ಎಚ್‌ಡಿಬಿ ಫೈನಾನ್ಶಿಯಲ್‌ ಸರ್ವಿಸಸ್‌   

ನವದೆಹಲಿ: ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಂಗ ಸಂಸ್ಥೆಯಾದ ಬ್ಯಾಂಕೇತರ ಹಣಕಾಸು ಸಂಸ್ಥೆ ಎಚ್‌ಡಿಬಿ ಫೈನಾನ್ಶಿಯಲ್‌ ಸರ್ವಿಸಸ್‌, ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಮೂಲಕ ₹12,500 ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.

ಐಪಿಒ ವೇಳೆ ಜೂನ್‌ 25ರಿಂದ 27ರವರೆಗೆ ಸಾರ್ವಜನಿಕರಿಗೆ ಷೇರುಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಜೂನ್ 24ರಂದು ಆರಂಭಿಕ ಹೂಡಿಕೆದಾರರು (ಆ್ಯಂಕರ್‌ ಇನ್‌ವೆಸ್ಟರ್) ಅರ್ಜಿ ಸಲ್ಲಿಸಬಹುದು ಎಂದು ಬ್ಯಾಂಕ್ ಷೇರುಪೇಟೆಗೆ ಗುರುವಾರ ತಿಳಿಸಿದೆ.

ಬ್ಯಾಂಕ್‌ನ ಅರ್ಹ ಉದ್ಯೋಗಿಗಳು ಮತ್ತು ಷೇರುದಾರರಿಗೆ ಐಪಿಒದಲ್ಲಿ ಮೀಸಲಾತಿ ಇರುತ್ತದೆ. ಐಪಿಒ ಮೂಲಕ ಸಂಗ್ರಹಿಸುವ ಬಂಡವಾಳವನ್ನು ಭವಿಷ್ಯದ ಬಂಡವಾಳ ಅಗತ್ಯತೆ, ವ್ಯಾಪಾರದ ಬೆಳವಣಿಗೆಗೆ ಬಳಸಲಾಗುವುದು ಎಂದು ತಿಳಿಸಿದೆ.

ADVERTISEMENT

ಪ್ರಸ್ತುತ ಎಚ್‌ಡಿಬಿ ಫೈನಾನ್ಶಿಯಲ್‌ ಸರ್ವಿಸಸ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಶೇ 94.36ರಷ್ಟು ಪಾಲನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.