ADVERTISEMENT

ಆರೋಗ್ಯ ವಿಮೆ: ಹೊಸ ಮಾರ್ಗದರ್ಶಿ ಸೂತ್ರ

ಪಿಟಿಐ
Published 14 ಜೂನ್ 2020, 19:31 IST
Last Updated 14 ಜೂನ್ 2020, 19:31 IST
ಆರೋಗ್ಯ ವಿಮೆ
ಆರೋಗ್ಯ ವಿಮೆ   

ನವದೆಹಲಿ: ಆರೋಗ್ಯ ವಿಮೆಯ ಕ್ಲೇಮ್‌ಗಳಿಗೆ ಸಂಬಂಧಿಸಿದಂತೆವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಹೊಸ ಮಾರ್ಗದರ್ಶಿ ಸೂತ್ರ ಪ್ರಕಟಿಸಿದೆ.

ನಿರಂತರವಾಗಿ ಎಂಟು ವರ್ಷಗಳವರೆಗೆ ವಿಮೆಯ ಕಂತುಗಳನ್ನು ಪಾವತಿಸಿದ ಸಂದರ್ಭಗಳಲ್ಲಿ ಕ್ಲೇಮ್‌ ಪ್ರಶ್ನಿಸಲು ವಿಮೆ ಕಂಪನಿಗಳಿಗೆ ಅನುಮತಿ ನೀಡುವುದಿಲ್ಲ ಎಂದು ಪ್ರಾಧಿಕಾರವು ತಿಳಿಸಿದೆ.

ಆರೋಗ್ಯ ವಿಮಾ ಯೋಜನೆಗಳ ಒಪ್ಪಂದದ ಸಾಮಾನ್ಯ ನಿಯಮಗಳು ಮತ್ತು ವಿಧಿಗಳನ್ನು ಸರಳಗೊಳಿಸುವ ಹಾಗೂ ಉದ್ದಿಮೆಯಲ್ಲಿ ಏಕರೂಪತೆ ಕಾಯ್ದುಕೊಳ್ಳುವ ಉದ್ದೇಶದಿಂದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಾಗಿದೆ.

ADVERTISEMENT

ಈಗಾಗಲೇ ಚಾಲ್ತಿಯಲ್ಲಿರುವ ಎಲ್ಲಾ ಆರೋಗ್ಯ ವಿಮೆ ಯೋಜನೆಗಳನ್ನು 2021ರ ಏಪ್ರಿಲ್‌ನಿಂದ ನವೀಕರಿಸುವಾಗಮಾರ್ಗದರ್ಶಿ ‌ಸೂತ್ರಗಳ ಅನ್ವಯ ಬದಲಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.