ADVERTISEMENT

ಹೋಂಡಾ ದ್ವಿಚಕ್ರ ವಾಹನ ಬೆಲೆ ₹18 ಸಾವಿರ ಇಳಿಕೆ

ಪಿಟಿಐ
Published 11 ಸೆಪ್ಟೆಂಬರ್ 2025, 14:30 IST
Last Updated 11 ಸೆಪ್ಟೆಂಬರ್ 2025, 14:30 IST
.
.   

ನವದೆಹಲಿ: ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ (ಎಚ್ಎಂಎಸ್‌ಐ) ವಾಹನಗಳ ಮೇಲಿನ ಜಿಎಸ್‌ಟಿ ಇಳಿಕೆಯ ಪರಿಣಾಮವಾಗಿ ತನ್ನ ವಾಹನಗಳ ಬೆಲೆ ಕಡಿಮೆ ಆಗಲಿದೆ ಎಂದು ಗುರುವಾರ ತಿಳಿಸಿದೆ.

350 ಸಿಸಿ ಸಾಮರ್ಥ್ಯದವರೆಗಿನ ದ್ವಿಚಕ್ರ ವಾಹನಗಳು ಮತ್ತು ಸ್ಕೂಟರ್‌ಗಳ ಬೆಲೆಯನ್ನು ₹18,800 ಕಡಿಮೆ ಮಾಡಿದೆ. ಇದು ಎಕ್ಸ್‌–ಷೋರೂಂ ದರವಾಗಿದೆ. ಜಿಎಸ್‌ಟಿ ದರ ಕಡಿತದ ಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ಕಂಪನಿ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT