ADVERTISEMENT

ಆನ್‌ಲೈನ್‌ನಲ್ಲಿ ವಾಹನ ಸಾಲ: ಹುಂಡೈ–ಐಸಿಐಸಿಐ ಬ್ಯಾಂಕ್‌ ಒಪ್ಪಂದ

ಪಿಟಿಐ
Published 22 ಜೂನ್ 2020, 15:14 IST
Last Updated 22 ಜೂನ್ 2020, 15:14 IST
ಹುಂಡೈ
ಹುಂಡೈ   

ಮುಂಬೈ: ಗ್ರಾಹಕರಿಗೆ ಆನ್‌ಲೈನ್‌ ಸಾಲ ಸೌಲಭ್ಯ ಒದಗಿಸಲು ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ಐಸಿಐಸಿಐ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

‘Click to Buy’ ಜಾಲತಾಣದಲ್ಲಿ ಕಾರ್‌ ಖರೀದಿಗೆ ಹಣಕಾಸು ಆಯ್ಕೆಗಳನ್ನು ನೀಡಲಾಗಿದೆ. ಇದರಿಂದ ಸಂಪರ್ಕರಹಿತ, ಸುಲಭವಾಗಿ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ‌.

‘ಕ್ಲಿಕ್‌ ಟು ಬೈ’ ಮೂಲಕ ತನ್ನ ಗ್ರಾಹಕರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಐಸಿಐಸಿಐ ಬ್ಯಾಂಕ್‌ನೊಂದಿಗಿನ ಪಾಲುದಾರಿಕೆಯಿಂದ ಗ್ರಾಹಕರು ಯಾವುದೇ ಸ್ಥಳದಲ್ಲಿದ್ದರೂ ಸುಲಭವಾಗಿ ಹಣಕಾಸಿನ ನೆರವು ಪಡೆದುಕೊಳ್ಳಬಹುದು’ ಎಂದು ಕಂಪನಿ ತಿಳಿಸಿದೆ.

ADVERTISEMENT

ಬ್ಯಾಂಕ್‌ನಿಂದ ಮುಂಚಿತವಾಗಿಯೇ ಒಪ್ಪಿಗೆ ಪಡೆದುಕೊಂಡ ಗ್ರಾಹಕರು ‘ಕ್ಲಿಕ್‌ ಟು ಬೈ’ ಮೂಲಕ ನೇರವಾಗಿ ಕಾರ್‌ ಖರೀದಿ ಸಾಲಕ್ಕೆ ಮನವಿ ಸಲ್ಲಿಸಬಹುದು. ಬ್ಯಾಂಕ್‌ ಶಾಖೆಗೆ ಭೇಟಿ ನೀಡದೇ ತಕ್ಷಣವೇ ಸಾಲ ಪಡೆಯಬಹುದು. ಈ ಸೌಲಭ್ಯದಡಿ ಶೇ 100ರಷ್ಟು ಆನ್‌ರೋಡ್‌ ಸಾಲ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.