ADVERTISEMENT

ಹುಂಡೈ: ಹೊಸ ಸ್ಯಾಂಟ್ರೊ ಬಿಡುಗಡೆ

ಪಿಟಿಐ
Published 25 ಅಕ್ಟೋಬರ್ 2019, 17:49 IST
Last Updated 25 ಅಕ್ಟೋಬರ್ 2019, 17:49 IST
ಬಾಲಿವುಡ್‌ ನಟ ಶಾರೂಖ್‌ ಖಾನ್‌, ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹೊಸ ಸ್ಯಾಂಟ್ರೊ ಅನಾವರಣಗೊಳಿಸಿದರು – ಪಿಟಿಐ ಚಿತ್ರ
ಬಾಲಿವುಡ್‌ ನಟ ಶಾರೂಖ್‌ ಖಾನ್‌, ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹೊಸ ಸ್ಯಾಂಟ್ರೊ ಅನಾವರಣಗೊಳಿಸಿದರು – ಪಿಟಿಐ ಚಿತ್ರ   

ನವದೆಹಲಿ: ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ತನ್ನ ಕಾಂಪ್ಯಾಕ್ಟ್‌ ಕಾರ್‌ ಸ್ಯಾಂಟ್ರೊದ ವಾರ್ಷಿಕ ಆವೃತ್ತಿಯನ್ನು ಬಿಡುಗುಡೆ ಮಾಡಿದೆ.

ಈ ಸೀಮಿತ ಆವೃತ್ತಿಯ ಸ್ಪೋರ್ಟ್ಸ್‌ ಎಂಟಿ ಮತ್ತು ಎಎಂಟಿ ಬೆಲೆಗಳು ಕ್ರಮವಾಗಿ (ಎಕ್ಸ್‌ ಷೋರೂಂ) ₹ 5.15 ಲಕ್ಷ ಮತ್ತು ₹ 5.74 ಲಕ್ಷದವರೆಗೆ ಇದೆ. ಎರಡು ಬಣ್ಣಗಳಲ್ಲಿ ದೊರೆಯಲಿದೆ. ಕುಟುಂಬಗಳ ಅಗತ್ಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸ್ಯಾಂಟ್ರೊ ಅಭಿವೃದ್ಧಿಪಡಿಸಲಾಗಿದೆ. ಸೆಪ್ಟೆಂಬರ್‌ವರೆಗೆ ಒಟ್ಟಾರೆ 75,944 ಹೊಸ ಸ್ಯಾಂಟ್ರೊ ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

‘ಸ್ಯಾಂಟ್ರೊ ಕಾರ್‌ ಕಳೆದ ಎರಡು ದಶಕಗಳಲ್ಲಿ ಹಲವಾರು ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ಜಾಗತಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸದ ಸೀಮಿತ ಆವೃತ್ತಿಯು ಗ್ರಾಹಕರಿಗೆ ಮೆಚ್ಚುಗೆ ಆಗಲಿದೆ’ ಎಂದು ಕಂಪನಿಯ ಮಾರಾಟ ವಿಭಾಗದ ಮುಖ್ಯಸ್ಥ ವಿಕಾಸ್‌ ಜೈನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.