ನವದೆಹಲಿ: ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿ. ವೈದ್ಯನಾಥನ್ ಅವರು ತಮ್ಮ ಬಳಿ ಇದ್ದ, ಬ್ಯಾಂಕ್‌ನ 9 ಲಕ್ಷ ಷೇರುಗಳನ್ನು ತಮ್ಮ ತರಬೇತುದಾರ, ಮನೆಯ ಸಹಾಯಕ, ಚಾಲಕ ಸೇರಿದಂತೆ ಒಟ್ಟು ಐವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇಷ್ಟು ಷೇರುಗಳ ಮೌಲ್ಯವು ₹ 3.95 ಕೋಟಿಗಿಂತ ಹೆಚ್ಚು.
ಐದೂ ಜನ ವೈದ್ಯನಾಥನ್ ಅವರ ಸಂಬಂಧಿಗಳಲ್ಲ. ಅವರಿಗೆ ಮನೆ ಖರೀದಿಗೆ ನೆರವಾಗಲಿ ಎಂಬ ಉದ್ದೇಶದಿಂದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ವೈದ್ಯನಾಥನ್ ಅವರು ಈ ಹಿಂದೆಯೂ ಇದೇ ರೀತಿ ಷೇರು ಉಡುಗೊರೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.