ನವದೆಹಲಿ: ಇಫ್ಕೊ ಸಂಸ್ಥೆಯು ದ್ರವರೂಪದ ನ್ಯಾನೊ ಯೂರಿಯಾ ತಯಾರಿಕೆಯನ್ನು ಆರಂಭಿಸಿದ್ದು, ಉತ್ತರ ಪ್ರದೇಶದ ರೈತರಿಗೆ ಮೊದಲ ಉತ್ಪನ್ನವನ್ನು ರವಾನಿಸಿದೆ.
500 ಮಿಲಿ ಲೀಟರಿನ ಪ್ರತಿ ಬಾಟಲಿಯ ಬೆಲೆ ₹ 240. ಗುಜರಾತ್‌ನಲ್ಲಿ ಇರುವ ನ್ಯಾನೊ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ನ್ಯಾನೋ ಯೂರಿಯಾ 21ನೇ ಶತಮಾನದ ಉತ್ಪನ್ನ. ಪರಿಸರ, ಮಣ್ಣು, ಗಾಳಿ ಮತ್ತು ನೀರನ್ನು ಭವಿಷ್ಯದ ಪೀಳಿಗೆಗೆ ಸುರಕ್ಷಿತವಾಗಿಡಲು, ಎಲ್ಲರಿಗೂ ಆಹಾರ ಭದ್ರತೆಯನ್ನು ಖಾತರಿಪಡಿಸಲು ಇದರ ಅಗತ್ಯ ಇದೆ ಎಂದು ಇಫ್ಕೊ ಉಪಾಧ್ಯಕ್ಷ ದಿಲೀಪ್ ಶಂಗಾನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.