ADVERTISEMENT

ಉಕ್ರೇನ್‌ಗೆ 140 ಕೋಟಿ ಡಾಲರ್ ತುರ್ತು ನೆರವಿಗೆ ಐಎಂಎಫ್ ಮಂಡಳಿ ನಿರ್ಧಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮಾರ್ಚ್ 2022, 5:18 IST
Last Updated 9 ಮಾರ್ಚ್ 2022, 5:18 IST
ಐಎಂಎಫ್ ಟ್ವಿಟರ್ ಖಾತೆಯ ಚಿತ್ರ
ಐಎಂಎಫ್ ಟ್ವಿಟರ್ ಖಾತೆಯ ಚಿತ್ರ   

ವಾಷಿಂಗ್ಟನ್: ರಷ್ಯಾದ ಆಕ್ರಮಣಕ್ಕೆ ಪ್ರತಿಕ್ರಿಯಿಸಲು ಉಕ್ರೇನ್‌ಗೆ 140 ಕೋಟಿ ಡಾಲರ್ ತುರ್ತು ನಿಧಿಯನ್ನು ಅನುಮೋದಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಕಾರ್ಯನಿರ್ವಾಹಕ ಮಂಡಳಿಯು ಸಿದ್ಧವಾಗಿದೆ ಎಂದು ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ಐಎಂಎಫ್, ಉಕ್ರೇನ್‌ಗೆ 70 ಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಹಣ ನೀಡಿದೆ. ಆಗಸ್ಟ್‌ನಲ್ಲಿ ಐಎಂಎಫ್‌ನ ಹಂಚಿಕೆಯ ಭಾಗವಾಗಿ 270 ಕೋಟಿ ಡಾಲರ್ ತುರ್ತು ಮೀಸಲು ಹಣ ಪಡೆ‌ದಿದೆ ಎಂದು ಅವರು ಹೇಳಿದ್ದಾರೆ.

ರಷ್ಯಾ ಆಕ್ರಮಣದಿಂದ ಉಕ್ರೇನ್ ತತ್ತರಿಸುತ್ತಿದ್ದು, ಯುರೋಪ್ ದೇಶಗಳು ನೆರವಿನ ಹಸ್ತ ಚಾಚಿವೆ. ಭಾರತವು ಸಹ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.