ಕೋಲ್ಕತ್ತ): ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ದೇಶದ ಕಂಪನಿಗಳ ಜಾಗತಿಕ ವ್ಯಾಪಾರದ ಮೇಲೆ ಇಲ್ಲಿಯವರೆಗೆ ಯಾವುದೇ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಕ್ರಿಸಿಲ್ ವರದಿ ಶುಕ್ರವಾರ ತಿಳಿಸಿದೆ.
ಆದರೆ ಅನಿಶ್ಚಿತತೆ ಹೆಚ್ಚಳವಾದರೆ, ಕೆಲವು ವಲಯಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.
ಅನಿಶ್ಚಿತತೆಯು ಜಾಗತಿಕ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಬ್ರೆಂಟ್ ಕಚ್ಚಾ ತೈಲ ದರವು ಪ್ರತೀ ಬ್ಯಾರೆಲ್‌ಗೆ 76 ಡಾಲರ್ ದಾಟಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ 65 ಡಾಲರ್‌ನಷ್ಟಿತ್ತು.
ಬಿಕ್ಕಟ್ಟು ಹೆಚ್ಚಳಗೊಂಡರೆ ತೈಲ ಬೆಲೆಯಲ್ಲಿ ಮತ್ತಷ್ಟು ಏರಿಕೆಗೆ ಕಾರಣವಾಗಬಹುದು. ಇದು ತೈಲ ಕಂಪನಿಗಳ ಲಾಭ ಹೆಚ್ಚಿಸಲಿದೆ. ಈ ಬಿಕ್ಕಟ್ಟು ತೈಲ ಪೂರೈಕೆ ಸರಪಳಿಗೆ ಅಡ್ಡಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.