ADVERTISEMENT

ಭಾರತದ ಆರ್ಥಿಕತೆ ಸುಧಾರಿಸಿದ್ದರೂ ಸಂಕಷ್ಟದಿಂದ ಪಾರಾಗಿಲ್ಲ: ವಿಶ್ವಬ್ಯಾಂಕ್‌

ಪಿಟಿಐ
Published 31 ಮಾರ್ಚ್ 2021, 14:20 IST
Last Updated 31 ಮಾರ್ಚ್ 2021, 14:20 IST
ವಿಶ್ವ ಬ್ಯಾಂಕ್‌
ವಿಶ್ವ ಬ್ಯಾಂಕ್‌   

ವಾಷಿಂಗ್ಟನ್‌: ಕೋವಿಡ್‌–19 ಪಿಡುಗು ಹಾಗೂ ದೇಶದಾದ್ಯಂತ ವಿಧಿಸಲಾಗಿದ್ದ ಲಾಕ್‌ಡೌನ್‌ ಪರಿಣಾಮ ಕುಸಿದಿದ್ದ ಭಾರತದ ಆರ್ಥಿಕತೆ ಆಶ್ಚರ್ಯಕರವಾಗಿ ಪುಟಿದೆದ್ದಿದೆ. ಆದರೆ, ಸಂಕಷ್ಟದಿಂದ ಇನ್ನೂ ಪಾರಾಗಿಲ್ಲ ಎಂದು ವಿಶ್ವಬ್ಯಾಂಕ್‌ ಅಭಿಪ್ರಾಯಪಟ್ಟಿದೆ.

ವಿಶ್ವ ಬ್ಯಾಂಕ್‌ ಬಿಡುಗಡೆ ಮಾಡಿರುವ ‘ಸೌತ್‌ ಏಷ್ಯಾ ಎಕನಾಮಿಕ್‌ ಫೋಕಸ್‌’ ಎಂಬ ವರದಿಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದ್ದು, 2021–22ನೇ ಸಾಲಿನಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ 7.5 ರಿಂದ ಶೇ 12.5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.

2017–18ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಪ್ರಗತಿ ದರ ಶೇ 8.3 ತಲುಪಿತ್ತು. ಆದರೆ, ಕೋವಿಡ್‌–19 ವ್ಯಾಪಕಗೊಂಡ ವರ್ಷದಲ್ಲಿ ಇದು ಶೇ 4ಕ್ಕೆ ಕುಸಿಯಿತು ಎಂದೂ ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.