ADVERTISEMENT

ಮೇ ತಿಂಗಳಲ್ಲಿ ರಷ್ಯಾದ ಶೇ.80ರಷ್ಟು ತೈಲ ಖರೀದಿಸಿದ ಭಾರತ, ಚೀನಾ

ಪಿಟಿಐ
Published 16 ಜೂನ್ 2023, 11:47 IST
Last Updated 16 ಜೂನ್ 2023, 11:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ರಷ್ಯಾ ದೇಶವು ರಿಯಾಯಿತಿ ಬೆಲೆಗೆ ಮಾರಾಟ ಮಾಡುತ್ತಿರುವ ಕಚ್ಚಾ ತೈಲದಲ್ಲಿ ಶೇಕಡ 80ರಷ್ಟನ್ನು ಭಾರತ ಮತ್ತು ಚೀನಾ, ಮೇ ತಿಂಗಳಿನಲ್ಲಿ ಖರೀದಿಸಿವೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ವರದಿ ಹೇಳಿದೆ.

ರಷ್ಯಾ ದೇಶವು ರಿಯಾಯಿತಿ ದರಕ್ಕೆ ಕಚ್ಚಾ ತೈಲ ಮಾರಾಟ ಮಾಡುತ್ತಿರುವ ಕಾರಣ ಭಾರತವು ದಿನವೊಂದಕ್ಕೆ ಖರೀದಿಸುತ್ತಿರುವ ತೈಲದ ಪ್ರಮಾಣವು ಮೇ ತಿಂಗಳಲ್ಲಿ 20 ಲಕ್ಷ ಬ್ಯಾರಲ್‌ಗೆ ಏರಿಕೆ ಕಂಡಿದೆ. ರಿಯಾಯಿತಿ ದರದಲ್ಲಿ ತೈಲ ಮಾರಾಟ ಮಾಡಲು ರಷ್ಯಾ ಮುಂದಾಗುವ ಮೊದಲು ಭಾರತವು ಅಲ್ಲಿಂದ ಖರೀದಿಸುವ ಕಚ್ಚಾ ತೈಲದ ಪ್ರಮಾಣವು ತೀರಾ ಕಡಿಮೆ ಇತ್ತು.

ಚೀನಾ ಪ್ರತಿ ದಿನ 22 ಲಕ್ಷ ಬ್ಯಾರಲ್‌ನಷ್ಟು ರಷ್ಯಾ ತೈಲವನ್ನು ಖರೀದಿಸುತ್ತಿದೆ ಎಂದು ಐಇಎ ತಿಳಿಸಿದೆ.

ADVERTISEMENT

ಮೇ ತಿಂಗಳಿನಲ್ಲಿ ರಷ್ಯಾದಿಂದ ಪ್ರತಿ ದಿನ ಸರಾಸರಿ 38.7 ಲಕ್ಷ ಬ್ಯಾರಲ್‌ನಷ್ಟು ಕಚ್ಚಾ ತೈಲ ರಫ್ತು ಆಗಿದೆ. 2022ರ ಫೆಬ್ರುವರಿಯಲ್ಲಿ ಉಕ್ರೇನ್‌ ಮೇಲೆ ರಷ್ಯಾ ಸಮರ ಸಾರಿದ ಬಳಿಕ ಆಗಿರುವ ಗರಿಷ್ಠ ಪ್ರಮಾಣದ ರಫ್ತು ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.