ADVERTISEMENT

ದೇಶದ ಕಚ್ಚಾ ಉಕ್ಕು ಉತ್ಪಾದನೆ ಶೇಕಡ 2.9ರಷ್ಟು ಇಳಿಕೆ

ಪಿಟಿಐ
Published 26 ಅಕ್ಟೋಬರ್ 2020, 11:33 IST
Last Updated 26 ಅಕ್ಟೋಬರ್ 2020, 11:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಕಚ್ಚಾ ಉಕ್ಕು ಉತ್ಪಾದನೆ ಸೆಪ್ಟೆಂಬರ್‌ನಲ್ಲಿ ಶೇಕಡ 2.9ರಷ್ಟು ಇಳಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ ಆದ ಕಚ್ಚಾ ಉಕ್ಕು ಉತ್ಪಾದನೆ 85.2 ಲಕ್ಷ ಟನ್‌ ಎಂದು ವಿಶ್ವ ಉಕ್ಕು ಒಕ್ಕೂಟ ತಿಳಿಸಿದೆ.

2019ರ ಸೆಪ್ಟೆಂಬರ್‌ನಲ್ಲಿ 87.7 ಲಕ್ಷ ಟನ್‌ ಕಚ್ಚಾ ಉಕ್ಕು ಉತ್ಪಾದನೆ ಆಗಿತ್ತು ಎಂದು ಅದು ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಜಾಗತಿಕವಾಗಿ ಕಚ್ಚಾ ಉಕ್ಕು ತಯಾರಿಕೆಯು ಸಕಾರಾತ್ಮಕ ಮಟ್ಟದಲ್ಲಿದೆ. ಸೆಪ್ಟೆಂಬರ್‌ನಲ್ಲಿ 64 ದೇಶಗಳ ಒಟ್ಟಾರೆ ಉತ್ಪಾದನೆ 15.63 ಕೋಟಿ ಟನ್‌. 2019ರ ಸೆಪ್ಟೆಂಬರ್‌ನಲ್ಲಿ ಇದ್ದ 15.18 ಕೋಟಿ ಟನ್‌ ಉತ್ಪಾದನೆಗೆ ಹೋಲಿಸಿದರೆ ಶೇ 2.9ರಷ್ಟು ಹೆಚ್ಚಾಗಿದೆ ಎಂದು ಅದು ಮಾಹಿತಿ ನೀಡಿದೆ.

ADVERTISEMENT

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಸೆಪ್ಟೆಂಬರ್‌ ತಿಂಗಳಿಗೆ ಅಂದಾಜಿನ ಮೇಲೆ ಅಂಕಿ–ಅಂಶಗಳನ್ನು ನೀಡಿದ್ದು, ಮುಂದಿನ ತಿಂಗಳ ಉತ್ಪಾದನೆಯ ಮಾಹಿತಿಯ ಬಳಿಕ ಪರಿಷ್ಕೃತ ಅಂಕಿ–ಅಂಶ ನೀಡುವ ಸಾಧ್ಯತೆ ಇದೆ ಎಂದು ಹೇಳಿದೆ.

ಹೆಚ್ಚಳ: ಚೀನಾದ ಉತ್ಪಾದನೆ ಶೇ 10ರಷ್ಟು ಹೆಚ್ಚಾಗಿದೆ. ದಕ್ಷಿಣ ಕೊರಿಯಾ (ಶೇ 2.1) ಬ್ರೆಜಿಲ್‌ (ಶೇ 7.5) ಹಾಗೂ ಟರ್ಕಿ (ಶೇ 18) ಉತ್ಪಾದನೆ ಕೂಡ ಹೆಚ್ಚಳ ಕಂಡಿವೆ.

ಇಳಿಕೆ: ಅಮೆರಿಕದ ಉತ್ಪಾದನೆ ಶೇ 18.5ರಷ್ಟು ಇಳಿಕೆಯಾಗಿದೆ. ಅದೇ ರೀತಿ ಜಪಾನ್ (ಶೇ 19.3), ಜರ್ಮನಿ (ಶೇ 9.7), ಇಟಲಿ (ಶೇ 18.7), ಫ್ರಾನ್ಸ್‌ (ಶೇ 20.1) ಹಾಗೂ ಸ್ಪೇನ್‌ (ಶೇ 20.7) ಉತ್ಪಾದನೆಯಲ್ಲಿ ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.