ನವದೆಹಲಿ: ‘ಪ್ರಸ್ತುತ ದೇಶವು 112 ರಾಷ್ಟ್ರಗಳಿಂದ ವಿದೇಶಿ ನೇರ ಬಂಡವಾಳವನ್ನು (ಎಫ್‌ಡಿಐ) ಸ್ವೀಕರಿಸುತ್ತಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
2013–14ರಲ್ಲಿ 89 ರಾಷ್ಟ್ರಗಳಿಂದ ವಿದೇಶಿ ನೇರ ಬಂಡವಾಳ ಸ್ವೀಕರಿಸಿತ್ತು ಎಂದು ಇಲ್ಲಿ ನಡೆದ ಎಫ್‌ಡಿಐ ಕಾರ್ಯಕ್ರಮದಲ್ಲಿ ಹೇಳಿದರು. ಭಾರತವನ್ನು, ಜಗತ್ತಿನ ಅತ್ಯಂತ ಆದ್ಯತೆಯ ಹೂಡಿಕೆಯ ತಾಣವನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.
‘ದೇಶದೊಳಗೆ ಮರುಹೂಡಿಕೆ ಹೆಚ್ಚಬೇಕಿದೆ. ಕೈಗಾರಿಕಾ ಪಾರ್ಕ್ ಮೂಲಸೌಕರ್ಯವನ್ನು ಸುಧಾರಿಸಲು ಮತ್ತು ಹೊಸ ವಿಸ್ತರಣಾ ಅವಕಾಶಗಳ ಅನ್ವೇಷಣೆಗೆ ಹೂಡಿಕೆದಾರರಿಂದ ಅಭಿಪ್ರಾಯ ಮತ್ತು ಸಲಹೆಗಳು ಅಗತ್ಯ’ ಎಂದು ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಕಾರ್ಯದರ್ಶಿ ಅಮರ್‌ದೀಪ್ ಸಿಂಗ್ ಭಾಟಿಯಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.