ನವದೆಹಲಿ: ಬಾಂಗ್ಲಾದೇಶದಿಂದ ನಿರ್ದಿಷ್ಟ ಸರಕುಗಳ ಆಮದಿಗೆ ಕೇಂದ್ರ ಸರ್ಕಾರ ಶನಿವಾರ ನಿರ್ಬಂಧ ವಿಧಿಸಿದೆ. ಕಳೆದ ತಿಂಗಳು ಬಾಂಗ್ಲಾದೇಶ ಭಾರತದ ಕೆಲ ಉತ್ಪನ್ನಗಳ ಆಮದು ಮೇಲೆ ಇದೇ ರೀತಿಯ ನಿರ್ಬಂಧ ವಿಧಿಸಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಬಾಂಗ್ಲಾದಿಂದ ಸಿದ್ಧ ಉಡುಪುಗಳು ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳಂತಹ ಕೆಲವು ಸರಕುಗಳಆಮದಿಗೆ ಭಾರತ ನಿರ್ಬಂಧ ವಿಧಿಸಿದೆ.
ಇದು, ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ (ಡಿಜಿಎಫ್‌ಟಿ) ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.