ADVERTISEMENT

ಚೀನಾದಲ್ಲಿ ಪ್ರಯಾಣ ನಿರ್ಬಂಧ: ಭಾರತದ ಕಂಪನಿಗಳ ಆತಂಕ

ಪಿಟಿಐ
Published 3 ಏಪ್ರಿಲ್ 2021, 13:59 IST
Last Updated 3 ಏಪ್ರಿಲ್ 2021, 13:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೀಜಿಂಗ್: ಚೀನಾದಲ್ಲಿ ಕೋವಿಡ್‌–19 ಸಂಬಂಧಿತ ವೀಸಾ ಮತ್ತು ಪ್ರಯಾಣ ನಿರ್ಬಂಧಗಳು ಮುಂದುವರಿದಿರುವ ಬಗ್ಗೆ ಅಲ್ಲಿ ವಹಿವಾಟು ನಡೆಸುತ್ತಿರುವ ಭಾರತದ ಕಂಪನಿಗಳು ಆತಂಕ ವ್ಯಕ್ತಪಡಿವೆ.

ಚೀನಾದಲ್ಲಿ ಭಾರತೀಯ ರಾಯಭಾರಿ ವಿಕ್ರಂ ಮಿಸ್ರಿ ಅವರೊಂದಿಗೆ ಭಾರತೀಯ ಕಂಪನಿಗಳ ಸಿಇಒಗಳು ಸಂವಾದ ನಡೆಸುವ ವೇಳೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಭಾರತ ಸ್ವಾತಂತ್ರ್ಯ ಗಳಿಸಿ 75 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಆಯೋಜಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಮಿಸ್ರಿ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ. ಬಳಿಕ ಜವಳಿ, ಔಷಧ, ಎಲೆಕ್ಟ್ರಾನಿಕ್ಸ್‌, ತಯಾರಿಕೆ, ರಾಸಾಯನಿಕ ಮತ್ತು ಐ.ಟಿ ವಲಯಗಳ 30ಕ್ಕೂ ಅಧಿಕ ಪ್ರತಿನಿಧಿಗಳೊಂದಿಗೆ ಮಿಸ್ರಿ ಅವರು ಸಭೆ ನಡೆಸಿದರು.

ADVERTISEMENT

ಚೀನಾವು ಕೋವಿಡ್‌–19 ನಿಯಂತ್ರಿಸಲು ಪ್ರಯಾಣ ಮತ್ತು ವೀಸಾ ನಿರ್ಬಂಧಗಳನ್ನು ಹೇರಿರುವುದರಿಂದ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಕಷ್ಟವಾಗುತ್ತಿದೆ ಎಂದು ಸಿಇಒಗಳು ಸಂವಾದದ ವೇಳೆ ಮಿಸ್ರಿ ಅವರಿಗೆ ತಿಳಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಯಾಣ ನಿರ್ಬಂಧಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಭಾರತೀಯ ರಾಯಭಾರಿ ಕಚೇರಿಯು ಚೀನಾ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.