ಮುಂಬೈ: ದೇಶಿ ಕಂಪನಿಗಳ ವಿದೇಶಿ ನೇರ ಬಂಡವಾಳ (ಒಎಫ್‌ಡಿಐ) ಹೂಡಿಕೆಯು ಹಿಂದಿನ ವರ್ಷದ ಜೂನ್‌ಗೆ ಹೋಲಿಸಿದರೆ ಈ ವರ್ಷದ ಜೂನ್‌ನಲ್ಲಿ ಎರಡು ಪಟ್ಟು ಹೆಚ್ಚಳ ಆಗಿದೆ.
ದೇಶಿ ಕಂಪನಿಗಳು ವಿದೇಶದಲ್ಲಿರುವ ತಮ್ಮ ಅಂಗಸಂಸ್ಥೆಗಳಲ್ಲಿ ಹಿಂದಿನ ವರ್ಷದ ಜೂನ್‌ನಲ್ಲಿ ₹ 10,286 ಕೋಟಿ ಹೂಡಿಕೆ ಮಾಡಿದ್ದವು. ಈ ವರ್ಷದ ಜೂನ್‌ನಲ್ಲಿ ಹೂಡಿಕೆಯ ಮೊತ್ತವು ₹ 20,720 ಕೋಟಿಗೆ ಏರಿಕೆ ಕಂಡಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.
ಆದರೆ, ಮೇ ತಿಂಗಳಿನಲ್ಲಿ ಆಗಿದ್ದ ಹೂಡಿಕೆಗೆ ಹೋಲಿಸಿದರೆ ಜೂನ್‌ನಲ್ಲಿ ಆಗಿರುವ ಹೂಡಿಕೆಯಲ್ಲಿ ಶೇ 58ರಷ್ಟು ಇಳಿಕೆ ಆಗಿದೆ. ಹೆಚ್ಚಿನ ಹೂಡಿಕೆ ಮಾಡಿರುವ ಕಂಪನಿಗಳ ಸಾಲಿನಲ್ಲಿ ಟಾಟಾ ಸ್ಟೀಲ್ (₹ 7,400 ಕೋಟಿ), ವಿಪ್ರೊ (₹ 5,827 ಕೋಟಿ) ಹಾಗೂ ಟಾಟಾ ಪವರ್ (₹ 971 ಕೋಟಿ) ಇವೆ. ಬ್ಯಾಂಕ್‌ಗಳು ಆನ್‌ಲೈನ್ ಮೂಲಕ ಸಲ್ಲಿಸಿದ ವರದಿ ಆಧರಿಸಿ ಈ ಮಾಹಿತಿ ನೀಡಲಾಗಿದ್ದು, ಇವು ತಾತ್ಕಾಲಿಕ ಎಂದು ಆರ್‌ಬಿಐ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.