ADVERTISEMENT

ಚಾಲ್ತಿ ಖಾತೆ ಕೊರತೆ ಶೇ 1.2ರಷ್ಟು

ಪಿಟಿಐ
Published 22 ಜೂನ್ 2022, 15:25 IST
Last Updated 22 ಜೂನ್ 2022, 15:25 IST

ಮುಂಬೈ (ಪಿಟಿಐ): ದೇಶದ ಚಾಲ್ತಿ ಖಾತೆ ಕೊರತೆಯು (ಸಿಎಡಿ) 2021–22ರಲ್ಲಿ ಒಟ್ಟು ಜಿಡಿಪಿಯ ಶೇಕಡ 1.2ರಷ್ಟು ಆಗಿದೆ ಎಂದು ಆರ್‌ಬಿಐ ಹೇಳಿದೆ. 2020–21ರಲ್ಲಿ ಚಾಲ್ತಿ ಖಾತೆ ಮಿಗತೆ ಶೇ 0.9ರಷ್ಟು ಇತ್ತು.

ಚಾಲ್ತಿ ಖಾತೆ ಕೊರತೆ ಸೃಷ್ಟಿಯಾಗಿರುವುದಕ್ಕೆ ಮುಖ್ಯ ಕಾರಣ ವ್ಯಾಪಾರ ಕೊರತೆ ಜಾಸ್ತಿ ಆಗಿರುವುದು ಎಂದು ಆರ್‌ಬಿಐ ಹೇಳಿದೆ. ಈ ವರ್ಷದ ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಸಿಎಡಿಯು ಜಿಡಿಪಿಯ ಶೇಕಡ 1.5ಕ್ಕೆ ತಗ್ಗಿದೆ. ಇದು ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ 2.6ರಷ್ಟು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT