ADVERTISEMENT

ಸೇವಾ ವಲಯದ ಪ್ರಗತಿ 15 ವರ್ಷದ ಗರಿಷ್ಠ

ಪಿಟಿಐ
Published 3 ಸೆಪ್ಟೆಂಬರ್ 2025, 15:38 IST
Last Updated 3 ಸೆಪ್ಟೆಂಬರ್ 2025, 15:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಬೆಳವಣಿಗೆ ಆಗಸ್ಟ್‌ ತಿಂಗಳಿನಲ್ಲಿ 15 ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ ದಾಖಲಿಸಿದೆ ಎಂದು ಮಾಸಿಕ ಸಮೀಕ್ಷೆಯೊಂದು ಬುಧವಾರ ತಿಳಿಸಿದೆ.

ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಜುಲೈನಲ್ಲಿ 60.5 ದಾಖಲಾಗಿತ್ತು. ಆಗಸ್ಟ್‌ನಲ್ಲಿ 62.9ಕ್ಕೆ ಹೆಚ್ಚಳ ಕಂಡಿದೆ. ಹೊಸ ಕಾರ್ಯಾದೇಶ ಮತ್ತು ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದೇ ಸೂಚ್ಯಂಕ ಏರಿಕೆಗೆ ಕಾರಣ ಎನ್ನಲಾಗಿದೆ.

ಪಿಎಂಐ ಮಾನದಂಡಗಳ ಪ್ರಕಾರ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಅದನ್ನು ಕುಸಿತವೆಂದು ಕಾಣಲಾಗುತ್ತದೆ.

ADVERTISEMENT

‘ರಫ್ತು ಹೆಚ್ಚಳಗೊಂಡಿದ್ದರಿಂದ ಒಟ್ಟಾರೆ ಮಾರಾಟ ಏರಿಕೆ ಕಂಡಿದೆ. ಏಷ್ಯಾ, ಯುರೋಪ್‌, ಪಶ್ಚಿಮ ಏಷ್ಯಾ ಮತ್ತು ಅಮೆರಿಕದಿಂದ ವಲಯಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ’ ಎಂದು ಎಚ್ಎಸ್‌ಬಿಸಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್‌ ಭಂಡಾರಿ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿದ ಮಾರಾಟದಿಂದ ದೇಶದ ಸೇವಾ ವಲಯದ ಕಂಪನಿಗಳು ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಲು ಮುಂದಾದವು. ಇದರಿಂದ ಕಾರ್ಮಿಕರ ವೆಚ್ಚ ಹೆಚ್ಚಳವಾಯಿತು. ಪರಿಣಾಮವಾಗಿ ತಯಾರಿಕೆ ಮತ್ತು ಉತ್ಪಾದನಾ ದರ ಏರಿಕೆಯಾಯಿತು ಎಂದು ತಿಳಿಸಿದ್ದಾರೆ. 

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.