ADVERTISEMENT

ರಷ್ಯಾದಿಂದ ಆಮದು: ಚೀನಾಕ್ಕೆ ದಿರ್ಹಂನಲ್ಲಿ ಪಾವತಿಗೆ ಭಾರತದ ವರ್ತಕರಿಗೆ ಸೂಚನೆ

ರಾಯಿಟರ್ಸ್
Published 13 ಮಾರ್ಚ್ 2023, 15:57 IST
Last Updated 13 ಮಾರ್ಚ್ 2023, 15:57 IST
   

ನವದೆಹಲಿ (ರಾಯಿಟರ್ಸ್): ರಷ್ಯಾದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಚೀನಾದ ಯುವಾನ್ ಕರೆನ್ಸಿಯಲ್ಲಿ ಹಣ ಪಾವತಿಸುವುದಕ್ಕೆ ಆದ್ಯತೆ ನೀಡಬಾರದು ಎಂದು ಕೇಂದ್ರ ಸರ್ಕಾರವು ಬ್ಯಾಂಕ್‌ಗಳಿಗೆ ಹಾಗೂ ವರ್ತಕರಿಗೆ ಸೂಚಿಸಿದೆ ಎಂದು ಗೊತ್ತಾಗಿದೆ.

ರಷ್ಯಾದಿಂದ ಕಚ್ಚಾ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳುತ್ತಿರುವ ಭಾರತವು, ಪಾವತಿಯನ್ನು ಯುಎಇ ಕರೆನ್ಸಿಯಾದ ದಿರ್ಹಂ ಬಳಕೆಗೆ ಮಂದಾಗುವಂತೆ ತಿಳಿಸಿದೆ. ಭಾರತ ಮತ್ತು ಚೀನಾ ನಡುವಿನ ಸಂಬಂಧವು ಸುಧಾರಿಸುವವರೆಗೆ, ಪಾವತಿಗಳನ್ನು ಯುವಾನ್‌ನಲ್ಲಿ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.